ತಿರುಚಿರಾಪಳ್ಳಿ, 27 ಜುಲೈ (ಹಿ.ಸ.) :
ಆ್ಯಂಕರ್ : ತಮಿಳುನಾಡಿನ ಪ್ರಸಿದ್ಧ ಗಂಗೈಕೊಂಡ ಚೋಳಪುರಂ ಶೈವ ದೇವಾಲಯದಲ್ಲಿ ಆದಿ ತಿರುವತಿರೈ ಹಬ್ಬದ ಅಂಗವಾಗಿ ಭಾನುವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಚೋಳ ಚಕ್ರವರ್ತಿ ರಾಜೇಂದ್ರ ಚೋಳ I ಅವರ ಜನ್ಮದಿನೋತ್ಸವವನ್ನೂ ಆಚರಿಸಲಾಯಿತು.
ಪ್ರಧಾನ ಮಂತ್ರಿಗಳು ರಾಜೇಂದ್ರ ಚೋಳನ ಸ್ಮರಣಾರ್ಥವಾಗಿ ಸ್ಮಾರಕ ನಾಣ್ಯವನ್ನೂ ಬಿಡುಗಡೆ ಮಾಡಿದರು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು, ಗಂಗಾ ನೀರಿನಿಂದ ತುಂಬಿದ 'ಕಲಶ'ವನ್ನು ತಮಗೆ ಜೊತೆಗೆ ತಂದು ಇದು ಪವಿತ್ರತೆ ಮತ್ತು ಏಕತೆಯ ಸಂಕೇತವಾಗಿದೆ ಎಂದರು.
ಭಾರತದ ವೈವಿಧ್ಯತೆಯ ಸಂಸ್ಕೃತಿ ನಮ್ಮ ಏಕತೆಯ ಶಕ್ತಿ. ಚೋಳರು ದಕ್ಷಿಣ ಭಾರತದಿಂದ ಶ್ರೀಲಂಕಾ, ಮಾಲ್ಡೀವ್ಸ್ ಸೇರಿ ಆಗ್ನೇಯ ಏಷ್ಯಾ ವರೆಗೆ ತಮ್ಮ ಪ್ರಭಾವ ಹರಡಿದ್ದರು,” ಎಂದರು. ಗಂಗಾ ನೀರನ್ನು ಉತ್ತರದಿಂದ ದಕ್ಷಿಣಕ್ಕೆ ತಂದ ರಾಜೇಂದ್ರ ಚೋಳನ ಕಾರ್ಯವನ್ನು ಮೋದಿ ಸ್ಮರಿಸಿದರು.
“ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವುದು ಗೌರವದ ವಿಷಯ. ನಾನು ದೇಶದ 140 ಕೋಟಿ ಜನರ ಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದೇನೆ” ಎಂದು ಪ್ರಧಾನಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa