ಬೆಂಗಳೂರು ಪೊಲೀಸ್ ಆಯುಕ್ತರಿಂದ ಸಾರ್ವಜನಿಕ ಸಂಪರ್ಕ ಸಭೆ
ಬೆಂಗಳೂರು, 26 ಜುಲೈ (ಹಿ.ಸ.) : ಆ್ಯಂಕರ್ : ಬೆಂಗಳೂರಿನ ಮಲ್ಲೇಶ್ವರಂನ ಜಲಮಂಡಳಿಯ ಸುವರ್ಣ ಭವನದಲ್ಲಿ ನಡೆದ ಮಾಸಿಕ ಜನಸಂಪರ್ಕ ಮತ್ತು ಸಂಚಾರ ದಿವಸ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಭಾಗವಹಿಸಿ ನಾಗರಿಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದರು. ಈ ಸಂದರ್ಭದಲ್ಲಿ ನೂರಾರು ನ
Public meet


ಬೆಂಗಳೂರು, 26 ಜುಲೈ (ಹಿ.ಸ.) :

ಆ್ಯಂಕರ್ : ಬೆಂಗಳೂರಿನ ಮಲ್ಲೇಶ್ವರಂನ ಜಲಮಂಡಳಿಯ ಸುವರ್ಣ ಭವನದಲ್ಲಿ ನಡೆದ ಮಾಸಿಕ ಜನಸಂಪರ್ಕ ಮತ್ತು ಸಂಚಾರ ದಿವಸ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಭಾಗವಹಿಸಿ ನಾಗರಿಕರ ಸಮಸ್ಯೆಗಳಿಗೆ ನೇರವಾಗಿ ಸ್ಪಂದಿಸಿದರು.

ಈ ಸಂದರ್ಭದಲ್ಲಿ ನೂರಾರು ನಾಗರಿಕರು ಸಂಚಾರ ದಟ್ಟಣೆ, ಅರ್ಧ-ಹೆಲ್ಮೆಟ್ ಬಳಕೆ, ರಸ್ತೆಬದಿಯ ಒತ್ತುವರಿ, ಪಾರ್ಕಿಂಗ್ ಸಮಸ್ಯೆ, ಮೌಲ್ಯದ ಮೀರಿದ ಆಟೋ ಬಾಡಿಗೆ, ಮತ್ತು ಜೀಬ್ರಾ ಕ್ರಾಸಿಂಗ್ ಕೊರತೆ ಇತ್ಯಾದಿ ವಿಷಯಗಳ ಕುರಿತು ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಪಾದಚಾರಿ ಸ್ಕೈವಾಕ್‌ಗಳು, ಹೆಚ್ಚುವರಿ ಬೀಟ್ ಪೊಲೀಸರು, ಹಂಪ್‌ಗಳು, ಮತ್ತು ಏಕಮಾರ್ಗ ರಸ್ತೆಗಳ ಗೊಂದಲ ಕುರಿತು ನಾಗರಿಕರಿಂದ ಬಹುಪಾಲು ಸಲಹೆಗಳು ಬಂದಿವೆ. ಈ ಎಲ್ಲಾ ಅಭಿಪ್ರಾಯಗಳು ಸಂಬಂಧಿತ ಡಿಸಿಪಿಗಳು, ಎಸಿಪಿಗಳು, ಹಾಗೂ ಠಾಣಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಸೂಚಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande