ಗದಗ, 26 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಬೆಟಗೇರಿಯ ನೇಕಾರ ನಗರದ ರಸ್ತೆಯಲ್ಲಿ ಗುಳಿಗಳ ಕಾಳಗ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದೆ. ನಡು ರಸ್ತೆಯಲ್ಲಿ ಎರಡು ಗುಳಿಗಳು ಪರಸ್ಪರ ಕುದ್ದಾಡಿದರೆ, ಇನ್ನೊಂದು ಗುಳಿ ಅಕಸ್ಮಾತ್ ಎಂಟ್ರಿ ನೀಡಿ ಕಾಳವನ್ನು ಮತ್ತಷ್ಟು ಭೀತಿದಾಯಕ ಮಾಡಿತು.
ದಿನದ ಬೆಳಗಿನ ಹೊತ್ತಿನಲ್ಲಿ ತೀವ್ರವಾಗಿ ನಡೆದ ಈ ಕಾಳಗವನ್ನು ನೋಡಿದ ಮಕ್ಕಳು, ಮಹಿಳೆಯರು, ಹಾಗೂ ವಾಹನ ಸವಾರರು ಭಯ ಭೀತಿಯಿಂದ ಓಡಿದ ದೃಶ್ಯ ಕಂಡುಬಂದಿತು. ಈ ಹಿಂದೆ ಸಹ ಗುಳಿಗಳ ಹಾವಳಿ ಸಾಕಷ್ಟು ಆತಂಕ ಉಂಟುಮಾಡಿದ್ದು, ಇದೀಗ ಮತ್ತೊಮ್ಮೆ ಪರಿಸ್ಥಿತಿ ಗಂಭೀರವಾಗುತ್ತಿದೆ.
ಅವಳಿ ನಗರವಾದ ಗದಗ-ಬೆಟಗೇರಿಯಲ್ಲಿ ಇತ್ತೀಚೆಗೆ ಗುಳಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ನಿತ್ಯ ಜೀವನಕ್ಕೆ ಅಡ್ಡಿಯಾಗಿದೆ. ಗುಳಿಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ನಗರಸಭೆಯ ಒತ್ತಾಯಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP