ಗದಗ, 26 ಜುಲೈ (ಹಿ.ಸ.) :
ಆ್ಯಂಕರ್ : 26 ವರ್ಷದ ಹಿಂದೆ ನಡೆದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಗದಗ ಶಹರ ಬಿಜೆಪಿ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡು ನಿವೃತ್ತ ಯೋಧರಾದ ಈರಪ್ಪ ಬಸ್ಸಪ್ಪ ಪಡೇಸೂರ ಹಾಗು ಚನ್ನವೀರಪ್ಪ ಸೊನ್ನದ ಇವರಿಗೆ ಅವರ ಮನೆಯಲ್ಲಿ ಸನ್ಮಾನಿಸಿದರು.
ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಡೆದ ಬಿಜೆಪಿ ನಗರ ಘಟಕದವರು ವೀರಯೋಧರಾದ ಈರಪ್ಪ ಪಡೇಸೂರ ಅವರ ಮನೆಗೆ ತೆರಳಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ಮಾತನಾಡುತ್ತಾ ನಮ್ಮ ವೀರಯೋಧರು ತಮ್ಮ ತ್ಯಾಗ ಬಲಿದಾನದಿಂದ ದೇಶದ ರಕ್ಷಣೆಯನ್ನು ಮಾಡುತ್ತಿರುವರು. ಕಾರ್ಗಿಲ್ ಎಂಬ ಹಿಮ ಬೀಳುವ ಪ್ರದೇಶದಲ್ಲಿ ಯುದ್ಧ ಮಾಡುವದು ಅಷ್ಟು ಸುಲಭವಲ್ಲಾ. ಅಂತಹ ಜಾಗದಲ್ಲಿ 1999 ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ದಿವಸ ಜುಲೈ 26 ಈ ವಿಜಯೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ನಮ್ಮ ದೇಶದ ಸೈನಿಕರಿಗೆ ಧೈರ್ಯ ತುಂಬುವದು ಹಾಗು ಅವರ ಸಾಹಸವನ್ನು ಮೆಚ್ಚುವದು ಪ್ರತೀಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಮಾತನಾಡಿದರು.
ಹಿರಿಯರಾದ ಎಂ.ಎಸ್.ಕರೀಗೌಡ್ರರವರು ಮಾತನಾಡಿ ಅಟಲ್ ಬಿಹಾರಿ ವಾಜಪೇಯಿ ರವರ ನೇತೃತ್ವದಲ್ಲಿ ಅಂದಿನ ಸರ್ಕಾರ ಪಾಕಿಸ್ತಾನಕ್ಕೆ ದಿಟ್ಟವಾದ ಉತ್ತರವನ್ನು ನೀಡಿತು. ನಮ್ಮ ಸೈನಿಕರ ಬಗ್ಗೆ ಎಚ್ಟು ಹೇಳಿದರು ಕಡಿಮೆಯೆ ಇಂದು ಭಾರತ ಬಲಿಷ್ಠ ರಾಷ್ಟ್ರವಾಗಿದೆ. ಪಾಕಿಸ್ತಾನ ಎಷ್ಟೆ ಬಾರಿ ನಮ್ಮ ಮೇಲೆ ಆಕ್ರಮಣವನ್ನು ಮಾಡಿದರೂ ಅದನ್ನು ಕೆಲವೇ ನಿಮಿಷಗಳಲ್ಲಿ ಹಿಮ್ಮೆಟ್ಟಿಸುವ ಧೈರ್ಯ ನಮ್ಮ ಸೈನಿಕರಲ್ಲಿದೆ ಎಂದು ಮಾತನಾಡಿದರು.
ಜಿಲ್ಲಾ ವಕ್ತಾರರಾದ ಎಂ.ಎಂ.ಹಿರೇಮಠರವರು ಮಾತನಾಡಿ ನಮ್ಮ ಸೈನಿಕರು ಹೆಂಡತಿ ಮಕ್ಕಳನ್ನು ಬಿಟ್ಟು ದೇಶದ ರಕ್ಷಣೆಗಾಗಿ ದುಡಿಯುತ್ತಿರುವರು. ಅವರು ತಮ್ಮ ಹೆಂಡತಿ ಮಕ್ಕಳ ವಿಚಾರವನ್ನು ಮಾಡದೆ ಇಡೀ ದೇಶದ ಜನರ ರಕ್ಷಣೆಯ ಹೊರೆಯನ್ನು ಅವರು ಹೊತ್ತುಕೊಂಡಿರುವರು. ಅವರು ದೇಶ ಕಾಯುತ್ತಿರುವುದರಿಂದ ಇಂದು ನಾವು ಆರಾಮವಾಗಿ ನಮ್ಮ ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡುತ್ತಿರುವೆವು ಎಂದು ಮಾತನಾಡಿದರು.
ಶಹರ ಅಧ್ಯಕ್ಷರಾದ ಸುರೇಶ ಮರಳಪ್ಪನವರ ಮಾತನಾಡಿ ನಮ್ಮ ದೇಶದ ಸೈನಿಕರಿಗೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿರುವರು. ಸೈನಿಕರಿಗೆ ಬೇಕಾದ ಒಳ್ಳೆಯ ಬುಲೇಟ್ ಫ್ರೂಪ್ ಜಾಕೆಟ್, ಒಳ್ಳೆಯ ಶಸ್ತ್ರಾಗಳನ್ನು ಕೊಟ್ಟಿರುವರು. ಸೈನಿಕರ ಎಲ್ಲ ಬೇಡಿಕೆಯನ್ನು ಇಡೇರಿಸಿರುವರು. ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಇವತ್ತು ಜಗತ್ತಿನಲ್ಲಿಯೇ ಅತಿ ಬಲಾಢ್ಯವಾದ ಸೈನಿಕರನ್ನು ಹೊಂದಿದ ದೇಶವಾಗಿದೆ ಎಂದು ಮಾತನಾಡಿದರು.
ಈ ಸನ್ಮಾನದ ಸಂದರ್ಭದಲ್ಲಿ ಅನೀಲ ಅಬ್ಬಿಗೇರಿ, ಅಶೋಕ ಸಂಕಣ್ಣವರ, ಸಂತೋಷ ಅಕ್ಕಿ, ಶಂಕರ ಕಾಕಿ, ಶಂಕರ ಕರಿಬಿಷ್ಠಿ, ಸುಧೀರ ಕಾಟಿಗರ, ಶಿವಪ್ಪ ಮುಳ್ಳಾಳ, ರಮೇಶ ಕುರ್ತಕೋಟಿ, ಬಸವರಾಜ ಜಕ್ಕಲಿ, ರಮೇಶ ಸಜ್ಜಗಾರ, ದೇವೆಂದ್ರಪ್ಪ ಹೂಗಾರ, ರಾಚಯ್ಯ ಹೊಸಮಠ, ಗೈಬುಸಾಬ ಕಲೇಬಾಯಿ, ವಿಜಯಕುಮಾರ ಹಿರೇಮಠ, ನಿರ್ಮಲಾ ಕೊಳ್ಳಿ, ಸ್ವಾತಿ ಅಕ್ಕಿ, ವಿಜಯ ಹಿರೇಮಠ, ಕುಮಾರ ಪಾಟೀಲ, ವಿನಾಯಕ ಕಾಟ್ವಾ, ವಿನಾಯಕ ಹೊರಕೇರಿ, ಮಂಜು ದೂನವರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP