ಗದಗ, 26 ಜುಲೈ (ಹಿ.ಸ.) :
ಆ್ಯಂಕರ್ : ಗದಗ ನಗರದ ಇತಿಹಾಸ ಪ್ರಸಿದ್ಧ ಒಕ್ಕಲಗೇರಿ ಓಣಿ ಶ್ರೀ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ನಿಮಿತ್ಯ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿದ್ದ ಷ.ಬ್ರ.ಪಕ್ಕೀರೇಶ್ವರ ಶಿವಚಾರ್ಯರು ಮಾತನಾಡುತ್ತಾ 12ನೇ ಶತಮಾನದಲ್ಲಿ ವಚನಗಳ ಮುಖಾಂತರ ಶರಣರು ತಮ್ಮ ಅನುಭವಗಳನ್ನು ವಚನದ ರೂಪದಲ್ಲಿ ಸಮಾಜಕ್ಕೆ ಕೊಟ್ಟಿದ್ದು, ಅವುಗಳು ಜಾತಿ, ಮತಭೇದವನ್ನು ಬಿಟ್ಟು ಕಟ್ಟಿದ ಅನುಭವಗಳು ಎಂದು ಮಾತನಾಡಿದರು.
ಶ್ರಾವಣ ಮಾಸ ಅಂದರೆ ಒಳ್ಳೆಯದನ್ನು ಕೇಳುವುದು ಶರಣರ ಅನುಭವಗಳನ್ನು ಕೇಳಿ ನಮ್ಮ ಜೀವನ ಪಾವನಗೊಳಿಸಬೇಕು. ಶ್ರಾವಣ ಮಾಸದಲ್ಲಿ ಒಳ್ಳೆಯದನ್ನು ಕೇಳಿ ಅದರಂತೆ ನಡೆದುಕೊಳ್ಳಬೇಕು.
ಗದಗ ಜ್ಞಾನದ ಗದ್ದುಗೆಯಾಗಿದೆ. ಪ್ರವಚನ ಹೇಳುವವರು ಶ್ರೇಷ್ಠರು, ಅದನ್ನು ಮನಸ್ಸಿನಿಂದ ಕೇಳಿ ಜೀವನದಲ್ಲಿ ಅಳವಡಿಸಿಕೊಂಡವರು ಕೂಡಾ ಶ್ರೇಷ್ಠರು. ಸುಂದರವಾದ ವಚನಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುವದು. ಅತೀ ವೇಗವಾಗಿ ಓಡುವದು ಯಾವುದಾದರೂ ಇದ್ದರೆ ಅದು ನಮ್ಮ ಮನಸ್ಸು. ಮನಸ್ಸು ಒಳ್ಳೆಯದನ್ನು ವಿಚಾರ ಮಾಡಿದರೆ ಮನಸ್ಸಿಗೆ ನೆಮ್ಮದಿ ಸಿಗುವದು. ಕೆಟ್ಟ ವಿಚಾರಗಳನ್ನು ತೆಲೆಯಲ್ಲಿ ತುಂಬಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲಾ ಎಂದು ಮಾತನಾಡಿದರು.
ಪ್ರವಚನಕಾರರಾದ ಮಾತೆ ನೀಲಮ್ಮತಾಯಿರವರು ಮಾತನಾಡುತ್ತಾ 12ನೇ ಶತಮಾನದ ಶರಣರು ತಮ್ಮ ಅನುಭಗಳನ್ನು ವಚನದ ಮುಖಾಂತರ ಜನರಿಗೆ ತಿಳಿಸಿದರು. ಶರಣರು ಜನರ ಮನಸ್ಸಿನ ಮೈಲಿಗೆ ತೊಳೆಯಲು ಶರಣರ ಅನುಭವಗಳನ್ನು ಒಂದು ತಿಂಗಳ ಪರ್ಯಂತ ಕೇಳುವುದರ ಮುಖಾಂತರ ಮನಸ್ಸಿನ ಮೈಲಿಗೆಯನ್ನು ತೊಳೆದುಕೊಳ್ಳಬೇಕು. ಮನಸ್ಸಿಗೆ ಸುಖಃ, ಶಾಂತಿ ಸಿಗಬೇಕಾದರೆ ಒಳ್ಳೆಯದನ್ನು ಕೇಳಬೇಕು. ಕ್ಷಣಿಕ ಸುಖಃಕ್ಕಾಗಿ ನಮ್ಮ ತನವನ್ನು ಕಳೆದುಕೊಳ್ಳಬಾರದು. ನಮಗೆ ಈಗ ಮಾನಸಿಕ ಶಾಂತಿ ಬೇಕಾಗಿದೆ. ಆ ಶಾಂತಿ ಸಿಗಬೇಕಾದರೆ ಶರಣರ ವಚನಗಳನ್ನು ಆಲಿಸುವ ಮುಖಾಂತರ ನೆಮ್ಮದಿಯನ್ನು ಪಡೆದುಕೊಳ್ಳಬೇಕು.
ಅಜ್ಞಾನ ಎಂಬ ನಿದ್ದೆಯಿಂದ ಏಳಬೇಕಾದರೆ ಶರಣರ ಅನುಭವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪುನಿತರಾಗಬೇಕು. ರಾಗ ಧ್ವೇಷ, ಅಸೂಯೆ ಬಿಟ್ಟರೆ ಮನಸ್ಸಿಗೆ ನೆಮ್ಮದಿ ಸಿಗುವದು ಅನುಭವ ಮಂಟಪದಲ್ಲಿ ಶರಣರು ತಮ್ಮ ಅನುಭವದ ಮಾತುಗಳನ್ನು ವಚನಗಳ ಮುಖಾಂತರ ಸಾದರಪಡಿಸಿದರು. ಶರಣರು ಕಟ್ಟಿದ್ದು ಅನುಭವ ಮಂಟಪವು ಜಾತಿ, ಮತ, ಭೇದವನ್ನು ಬಿಟ್ಟು ಕಟ್ಟಿದ್ದು ಸರ್ವರಿಗೂ ಸಮಾನತೆಯನ್ನು ಕೊಟ್ಟಿದ್ದು ಅನುಭವ ಮಂಟಪ ಎಂದು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್ ಕಮಿಟಿಯ ಹಿರಿಯ ಸದಸ್ಯರಾದ ಕೊಟ್ರಪ್ಪ ಕಮತರ ವಹಿಸಿದ್ದರು. ವೇದಿಕೆಯ ಮೇಲೆ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಟ್ರಸ್ಟ್ ಕಮಿಟಿಯ ಸದಸ್ಯರಾದ ಎಂ.ಎಂ.ಹಿರೇಮಠ, ಮುರಿಗೆಪ್ಪ ನಾಲ್ವಾಡ, ಚಂದ್ರಶೇಖರಪ್ಪ ಪಟ್ಟಣಶೆಟ್ಟಿ, ಶಿವಣ್ಣ ಕತ್ತಿ, ಸತ್ಸಂಗದ ಪ್ರಮುಖರಾದ ಶ್ರೀಮತಿ ಸುನಂದಾ ಜೊಬಾಳೆ, ಪ್ರವಚನ ಸಮಿತಿ ಅಧ್ಯಕ್ಷರಾದ ಶೇಖಪ್ಪ ಹೊಂಬಳ, ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿಗಳಾದ ಸಿದ್ದಣ್ಣ ಅರಳಿ, ಉಪಾಧ್ಯಕ್ಷರಾದ ಪಂಚಾಕ್ಷರಿ ಅಂಗಡಿ, ಪ್ರವೀಣ ನಂದಿಕೋಲಮಠ, ಬಸವರಾಜ ಮಡಿವಾಳರ, ಶ್ರೀಶೈಲಪ್ಪ ಪಟ್ಟಣಶೆಟ್ಟಿ, ಬಸವರಾಜ ಜಂತ್ಲಿ, ಬಸವರಾಜ ಮೊರಬದ, ವಿರುಪಾಕ್ಷಪ್ಪ ಅಂಗಡಿ, ಗಂಗಾಧರ ನಂದಿಕೊಲಮಠ, ಪ್ರಕಾಶ ಜಂತ್ಲಿ, ಶಂಕರ ನಿರಲಕೇರಿ, ಸುರೇಶ ಮಾಳವಾಡ ಹಾಗು ಸತ್ಸಂಗದ ಮಹಿಳಾ ಸದಸ್ಯನಿಯರು ಕೂಡಾ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP