ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಭೇಟಿ
ಲಂಡನ್, 24 ಜುಲೈ (ಹಿ.ಸ.) : ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಬ್ರಿಟನ್ ನ ಲಂಡನ್‌ ನಗರಕ್ಕೆ ಆಗಮಿಸಿದ್ದು, ಭಾರತೀಯ ಸಮುದಾಯದ ಅಪಾರ ಸಂಖ್ಯೆಯ ಜನರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಈ ಕುರಿತು ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿ
Pm


ಲಂಡನ್, 24 ಜುಲೈ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಬ್ರಿಟನ್ ನ ಲಂಡನ್‌ ನಗರಕ್ಕೆ ಆಗಮಿಸಿದ್ದು, ಭಾರತೀಯ ಸಮುದಾಯದ ಅಪಾರ ಸಂಖ್ಯೆಯ ಜನರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಈ ಕುರಿತು ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡು, “ಯುಕೆಯಲ್ಲಿರುವ ಭಾರತೀಯ ಸಮುದಾಯದ ಆತ್ಮೀಯ ಸ್ವಾಗತದಿಂದ ಹೃದಯ ತುಂಬಿದೆ. ಭಾರತದ ಪ್ರಗತಿಯ ಬಗ್ಗೆ ಅವರ ಪ್ರೀತಿ ಮತ್ತು ಉತ್ಸಾಹ ಹೃದಯಸ್ಪರ್ಶಿಯಾಗಿದೆ” ಎಂದು ತಿಳಿಸಿದ್ದಾರೆ.

ಇದೇ ವೇಳೆ ಭಾರತ - ಬ್ರಿಟನ್ ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರಧಾನಿ ಮೋದಿ ಸಹಿ ಹಾಕಲಿದ್ದಾರೆ

ಈ ಒಪ್ಪಂದದ ಮೂಲಕ 6 ಬಿಲಿಯನ್ ಪೌಂಡ್ (ಸುಮಾರು ₹63,000 ಕೋಟಿ)ಗಳ ಹೂಡಿಕೆ ಮತ್ತು ವ್ಯಾಪಾರ ಒಪ್ಪಂದಗಳಿಗೆ ಒಪ್ಪಿಗೆ ಸಿಗಲಿದೆ. ಈ ಒಪ್ಪಂದದಿಂದ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದ್ದು, ವ್ಯಾಪಾರ ಮತ್ತು ಕೈಗಾರಿಕೆಗೆ ಹೊಸ ಅವಕಾಶಗಳು ತೆರೆಯಲಿವೆ.

ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಮೋದಿ ಭೇಟಿಗೆ ಭಾರೀ ಮಹತ್ವ ನೀಡಿ, “ಭಾರತದೊಂದಿಗೆ ಐತಿಹಾಸಿಕ ಒಪ್ಪಂದ ದ್ವಿಪಕ್ಷೀಯ ಪ್ರಗತಿಗೆ ನಾಂದಿಯಾಗಲಿದೆ ಎಂದು ಹೇಳಿದ್ದಾರೆ. ಅವರು ಈ ಒಪ್ಪಂದವು ಬ್ರಿಟನ್‌ ವ್ಯಾಪಾರ ವಲಯದ ಹೊಸ ಅಧ್ಯಾಯವಾಗುತ್ತೆಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande