ಪ್ರಧಾನಿ ಮೋದಿ ಬ್ರಿಟನ್,ಮಾಲ್ಡೀವ್ಸ್ ಪ್ರವಾಸ
ನವದೆಹಲಿ, 23 ಜುಲೈ (ಹಿ.ಸ.) : ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ನಾಲ್ಕನೇ ಯುಕೆ (ಬ್ರಿಟನ್) ಭೇಟಿಗೆ ತೆರಳಿದ್ದಾರೆ. ಜುಲೈ 23ರಿಂದ 24ರವರೆಗೆ ನಡೆಯುವ ಈ ಅಧಿಕೃತ ಭೇಟಿಯ ಸಮಯದಲ್ಲಿ, ಅವರು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಹಾಗೂ ಕಿಂಗ್ ಚಾರ್ಲ್ಸ್ III ಅವರನ್ನು ಭೇಟ
Pm


ನವದೆಹಲಿ, 23 ಜುಲೈ (ಹಿ.ಸ.) :

ಆ್ಯಂಕರ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ತಮ್ಮ ನಾಲ್ಕನೇ ಯುಕೆ (ಬ್ರಿಟನ್) ಭೇಟಿಗೆ ತೆರಳಿದ್ದಾರೆ.

ಜುಲೈ 23ರಿಂದ 24ರವರೆಗೆ ನಡೆಯುವ ಈ ಅಧಿಕೃತ ಭೇಟಿಯ ಸಮಯದಲ್ಲಿ, ಅವರು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಹಾಗೂ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾಗಿ, ಭಾರತ-ಬ್ರಿಟನ್ ನಡುವೆ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

ಈ ಒಪ್ಪಂದದಿಂದಾಗಿ 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $120 ಬಿಲಿಯನ್ ಅಮೆರಿಕನ್ ಡಾಲರ್ ಮಟ್ಟಕ್ಕೇರಿಸುವ ಗುರಿಯಿದೆ. ಈ ವೇಳೆ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಕೂಡ ಲಂಡನ್‌ನಲ್ಲಿ ಉಪಸ್ಥಿತರಿರುವರು.

ಬ್ರಿಟನ್ ನಂತರ, ಪ್ರಧಾನಿ ಮೋದಿ ಅವರು ಜುಲೈ 25-26ರಂದು ಮಾಲ್ಡೀವ್ಸ್‌ಗೆ ಅಧಿಕೃತ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ಡಾ. ಮೊಹಮ್ಮದ್ ಮೊಯಿಝು ಅವರ ಆಹ್ವಾನದ ಮೇರೆಗೆ ನಡೆಯುವ ಈ ಭೇಟಿ, ಅವರ ಅಧ್ಯಕ್ಷರಾದ ನಂತರ ವಿದೇಶಿ ನಾಯಕನ ಮೊದಲ ಭೇಟಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande