ಭಾರತದ ಮಹಿಳಾ ತಂಡದಿಂದ ಇಂಗ್ಲೆಂಡ್ ನಲ್ಲಿ ಇತಿಹಾಸ ಸೃಷ್ಟಿ
ಚೆಸ್ಟರ್-ಲೆ-ಸ್ಟ್ರೀಟ್, 23 ಜುಲೈ (ಹಿ.ಸ.) : ಆ್ಯಂಕರ್ : ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅಜೇಯ ಶತಕ ಹಾಗೂ ಕ್ರಾಂತಿ ಗೌಡ್ ಅವರ ಮಿಂಚಿನ ಬೌಲಿಂಗ್‌ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ 13 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1
Cricket


ಚೆಸ್ಟರ್-ಲೆ-ಸ್ಟ್ರೀಟ್, 23 ಜುಲೈ (ಹಿ.ಸ.) :

ಆ್ಯಂಕರ್ : ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಅಜೇಯ ಶತಕ ಹಾಗೂ ಕ್ರಾಂತಿ ಗೌಡ್ ಅವರ ಮಿಂಚಿನ ಬೌಲಿಂಗ್‌ ಮೂಲಕ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ 13 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ತಮ್ಮದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 318 ರನ್ ಗಳಿಸಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ 84 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿದರು. ಜೆಮಿಮಾ ರೊಡ್ರಿಗ್ಸ್ (50), ಹರ್ಲೀನ್ ಡಿಯೋಲ್ (45) ಮತ್ತು ಸ್ಮೃತಿ ಮಂಧಾನ (45) ಉಪಯುಕ್ತ ಕೊಡುಗೆ ನೀಡಿದರು.

ಪ್ರತಿಸ್ಪರ್ಧೆಯಾಗಿ ಇಳಿದ ಇಂಗ್ಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 296 ರನ್‌ಗಳಷ್ಟೇ ಗಳಿಸಿತು. ನ್ಯಾಟ್ ಸಿವರ್-ಬ್ರಂಟ್ (98) ಮತ್ತು ಎಮ್ಮಾ ಲ್ಯಾಂಬ್ (68) ಉತ್ತಮ ಹೋರಾಟ ತೋರಿದರು. ಆದರೆ ಭಾರತದ ಕ್ರಾಂತಿ ಗೌಡ್ 52 ರನ್‌ಗಳಿಗೆ 6 ವಿಕೆಟ್‌ ಕಬಳಿಸಿ ಇಂಗ್ಲೆಂಡ್ ಗೆಲುವಿನ ಆಸೆ ಮುರಿದರು.

ಈ ಜಯದೊಂದಿಗೆ ವಿದೇಶಿ ನೆಲೆಯಲ್ಲಿ ಭಾರತೀಯ ಮಹಿಳಾ ತಂಡ ಮತ್ತೊಂದು ಸ್ಮರಣೀಯ ಸಾಧನೆ ಮಾಡಿದೆ. ಪಂದ್ಯಶ್ರೇಷ್ಠೆಯಾಗಿ ಹರ್ಮನ್‌ಪ್ರೀತ್ ಕೌರ್ ಆಯ್ಕೆಯಾದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande