ಚೀನಾದಿಂದ ಅಮೆರಿಕ ಸರ್ಕಾರಿ ಉದ್ಯೋಗಿಗೆ ತಡೆ
ವಾಷಿಂಗ್ಟನ್, 23 ಜುಲೈ (ಹಿ.ಸ.) : ಆ್ಯಂಕರ್ : ಖಾಸಗಿ ಭೇಟಿಗೆ ಚೀನಾಕ್ಕೆ ತೆರಳಿದ್ದ ಅಮೆರಿಕದ ಸರ್ಕಾರಿ ಉದ್ಯೋಗಿಯೊಬ್ಬರು ಹಿಂತಿರುಗಲು ಸಾಧ್ಯವಾಗದಂತಾಗಿದೆ. ಚೀನಾ ಅಧಿಕಾರಿಗಳು ಅವರಿಗೆ ದೇಶಬಿಟ್ಟು ಹೋಗದಂತೆ ತಡೆವಿದಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ದೃಢಪಡಿಸಿದೆ. ಈ ಸಂಬಂಧ ವಾಷಿಂಗ್
China


ವಾಷಿಂಗ್ಟನ್, 23 ಜುಲೈ (ಹಿ.ಸ.) :

ಆ್ಯಂಕರ್ : ಖಾಸಗಿ ಭೇಟಿಗೆ ಚೀನಾಕ್ಕೆ ತೆರಳಿದ್ದ ಅಮೆರಿಕದ ಸರ್ಕಾರಿ ಉದ್ಯೋಗಿಯೊಬ್ಬರು ಹಿಂತಿರುಗಲು ಸಾಧ್ಯವಾಗದಂತಾಗಿದೆ. ಚೀನಾ ಅಧಿಕಾರಿಗಳು ಅವರಿಗೆ ದೇಶಬಿಟ್ಟು ಹೋಗದಂತೆ ತಡೆವಿದಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ದೃಢಪಡಿಸಿದೆ.

ಈ ಸಂಬಂಧ ವಾಷಿಂಗ್ಟನ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಮಸ್ಯೆ ಪರಿಹಾರಕ್ಕಾಗಿ ಚೀನಾ ಜೊತೆ ಚರ್ಚೆ ನಡೆಸುತ್ತಿದೆ.

ಅವರು ಯುಎಸ್ ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಕಚೇರಿಗೆ ಸೇರಿದವರು ಎನ್ನಲಾಗಿದೆ. ಅಮೆರಿಕ ನಾಗರಿಕರ ಸುರಕ್ಷತೆ ಮತ್ತು ಬಿಡುಗಡೆ ನಮ್ಮ ಆದ್ಯತೆ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಚೀನಾದಲ್ಲಿ ತನಿಖೆ ಅಥವಾ ಕಾನೂನು ವಿವಾದ ಇರುವ ಸಂದರ್ಭಗಳಲ್ಲಿ ದೇಶ ಬಿಟ್ಟು ಹೋಗುವ ಮೇಲೆ ನಿರ್ಬಂಧ ವಹಿಸಲಾಗುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಈ ನೀತಿಯನ್ನು ದುರುಪಯೋಗ ಮಾಡಿಕೊಂಡು ವಿದೇಶಿಗರನ್ನು ಗುರಿಯಾಗಿಸುತ್ತಿರುವುದಾಗಿ ಆರೋಪಿಸುತ್ತಿವೆ.

ಇದಕ್ಕೂ ಮುನ್ನ ವೆಲ್ಸ್ ಫಾರ್ಗೋ ಬ್ಯಾಂಕ್‌ನ ಉದ್ಯೋಗಿ ಚೆನ್ಯು ಮಾವೋ ಅವರನ್ನು ಸಹ ಚೀನಾದಿಂದ ಹೊರಹೋಗದಂತೆ ತಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ತನ್ನ ಎಲ್ಲ ಚೀನಾ ಪ್ರಯಾಣಗಳನ್ನು ಸ್ಥಗಿತಗೊಳಿಸಿತ್ತು.

ಯುಎಸ್ ಉದ್ಯೋಗಿಗೆ ಸಂಬಂಧಿಸಿದಂತೆ, ಚೀನಾ ವಿದೇಶಾಂಗ ಸಚಿವಾಲಯ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ. ಈ ಘಟನೆಯ ನಡುವೆ ಅಮೆರಿಕದ ನಾಗರಿಕರಿಗೆ ಚೀನಾ ಪ್ರವಾಸ ಕುರಿತು ಎಚ್ಚರಿಕೆಯಿಂದ ವರ್ತಿಸಲು ಸೂಚನೆ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande