ಬಂಡಿಪೋರಾದಲ್ಲಿ ಭಯೋತ್ಪಾದಕರ 3 ಸಹಚರರ ಬಂಧನ
ಬಂಡಿಪೋರಾ, 23 ಜುಲೈ (ಹಿ.ಸ.) : ಆ್ಯಂಕರ್ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಿಟ್ಟಿ-ಬಂಡಿ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ನಾಕಾ ತಪಾಸಣೆಯ ವೇಳೆ ಭಯೋತ್ಪಾದಕರ ಮೂವರು ಸಹಚರರನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಬಂಧಿಸಲಾಗಿದೆ. ಭದ್ರತಾ ಪಡೆಗಳು ಶಂಕಾಸ್ಪದ ಚಲನವಲನದ ಮಾಹಿತಿ
ಬಂಡಿಪೋರಾದಲ್ಲಿ ಭಯೋತ್ಪಾದಕರ 3 ಸಹಚರರ ಬಂಧನ


ಬಂಡಿಪೋರಾ, 23 ಜುಲೈ (ಹಿ.ಸ.) :

ಆ್ಯಂಕರ್ : ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಚಿಟ್ಟಿ-ಬಂಡಿ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ನಾಕಾ ತಪಾಸಣೆಯ ವೇಳೆ ಭಯೋತ್ಪಾದಕರ ಮೂವರು ಸಹಚರರನ್ನು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಬಂಧಿಸಲಾಗಿದೆ.

ಭದ್ರತಾ ಪಡೆಗಳು ಶಂಕಾಸ್ಪದ ಚಲನವಲನದ ಮಾಹಿತಿ ಮೇರೆಗೆ ಚಿಟ್ಟಿ-ಬಂಡಿ ಪ್ರದೇಶದಲ್ಲಿ ತೀವ್ರ ನಾಕಾ ತಪಾಸಣೆ ಕೈಗೊಂಡಿದ್ದವು. ಈ ಸಂದರ್ಭ ತಪಾಸಣೆ ವೇಳೆ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಮೂವರು ವ್ಯಕ್ತಿಗಳನ್ನು ತಡೆದು ಪರಿಶೀಲನೆ ನಡೆಸಿದಾಗ, ಅವರ ಬಳಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಪತ್ತೆಯಾಗಿವೆ.

ಬಂಧಿತರನ್ನು ತಕ್ಷಣವೇ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande