ನವದೆಹಲಿ, 22 ಜುಲೈ (ಹಿ.ಸ.) :
ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಮತ್ತೊಂದೆಡೆ ಬೆಳ್ಳಿಯ ಬೆಲೆ ಇಳಿಕೆಯಾಗಿದೆ.
ಇಂದು ದೆಹಲಿಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,00,310 ರೂ. ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹91,960 ರೂ.ಗೆ ದಾಖಲಾಗಿದೆ. ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲಿ ಚಿನ್ನದ ದರ ₹1,00,160 (24 ಕ್ಯಾರೆಟ್) ಹಾಗೂ ₹91,810 (22 ಕ್ಯಾರೆಟ್)ರ ಮಟ್ಟದಲ್ಲಿದೆ.
ಅಹಮದಾಬಾದ್ ಮತ್ತು ಪಾಟ್ನಾದಂತಹ ನಗರಗಳಲ್ಲಿ ಕೂಡ ಚಿನ್ನದ ದರಗಳಲ್ಲಿ ಸಣ್ಣಮಟ್ಟದ ವ್ಯತ್ಯಾಸ ಕಂಡುಬಂದಿದೆ. ಲಕ್ನೋ ಮತ್ತು ಜೈಪುರದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,00,310 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ₹91,960 ರೂ.ಗಳಂತೆ ನಿಗದಿಯಾಗಿದೆ.
ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದ್ದು ದೆಹಲಿಯಲ್ಲಿ ಬೆಳ್ಳಿಯ ದರ ಪ್ರತಿ ಕಿಲೋಗ್ರಾಂಗೆ ₹1,15,900 ರಷ್ಟಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa