ಪ್ರಿಪಾಕ್ ಸಂಘಟನೆಯ ಉಗ್ರನ ಬಂಧನ
ಇಂಫಾಲ್, 21 ಜುಲೈ (ಹಿ.ಸ.): ಆ್ಯಂಕರ್:ಮಣಿಪುರದ ಭದ್ರತಾ ಪಡೆಗಳು ಇಂಫಾಲ ಪೂರ್ವ ಜಿಲ್ಲೆಯ ಕೊಂತಾ ಅಹ್ಲುಪ್ ಮಖಾ ಲೈಕೈನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿಷೇಧಿತ ಪ್ರಿಪಾಕ್ ಸಂಘಟನೆಯ ಉಗ್ರನನ್ನು ಬಂಧಿಸಿವೆ. ಮ್ಯಾನ್ಮಾರ್‌ನ ತನಲ್ ಪ್ರದೇಶದಲ್ಲಿ ಮಿಲಿಟರಿ ತರಬೇತಿ ಪಡೆದ ಕೊಂಜೆಂಗ್‌ಬಮ್ ಟೊಂಬಾ ಸಿಂಗ್ ಅಲಿಯಾ
Arrest


ಇಂಫಾಲ್, 21 ಜುಲೈ (ಹಿ.ಸ.):

ಆ್ಯಂಕರ್:ಮಣಿಪುರದ ಭದ್ರತಾ ಪಡೆಗಳು ಇಂಫಾಲ ಪೂರ್ವ ಜಿಲ್ಲೆಯ ಕೊಂತಾ ಅಹ್ಲುಪ್ ಮಖಾ ಲೈಕೈನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿಷೇಧಿತ ಪ್ರಿಪಾಕ್ ಸಂಘಟನೆಯ ಉಗ್ರನನ್ನು ಬಂಧಿಸಿವೆ. ಮ್ಯಾನ್ಮಾರ್‌ನ ತನಲ್ ಪ್ರದೇಶದಲ್ಲಿ ಮಿಲಿಟರಿ ತರಬೇತಿ ಪಡೆದ ಕೊಂಜೆಂಗ್‌ಬಮ್ ಟೊಂಬಾ ಸಿಂಗ್ ಅಲಿಯಾಸ್ ಲಿಂಗಮ್ (38) ಎಂಬಾತ ಪ್ರಿಪಾಕ್ ನ ಸ್ವಯಂಘೋಷಿತ ಸಾರ್ಜೆಂಟ್ ಮೇಜರ್ ಆಗಿದ್ದ.

ಅಕ್ಟೋಬರ್ 2024 ರಲ್ಲಿ ಪ್ರಿಪಾಕ್ ಸಂಘಟನೆಯ ಪರವಾಗಿ ಹೊಸ ಸದಸ್ಯರ ನೇಮಕಾತಿ ಕಾರ್ಯದಲ್ಲಿ ತೊಡಗಿದ್ದ ಈತನ ಬಂಧನದೊಂದಿಗೆ ಭದ್ರತಾ ಪಡೆಗಳು ಪ್ರಿಪಾಕ್ ಭೂಗತ ಜಾಲವನ್ನು ಪತ್ತೆಹಚ್ಚಲು ಮುಂದಾಗಿವೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande