ಇಂದಿನಿಂದ ಸಂಸತ್ತಿನ ಮಳೆಗಾಲದ ಅಧಿವೇಶನ
ನವದೆಹಲಿ, 21 ಜುಲೈ (ಹಿ.ಸ.) : ಆ್ಯಂಕರ್ : ಸಂಸತ್ತಿನ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ವಿರೋಧ ಪಕ್ಷಗಳು ಹಲವಾರು ಪ್ರಮುಖ ವಿಷಯಗಳಲ್ಲಿ ಸರ್ಕಾರವನ್ನು ಸಿಲುಕಿಸಲು ನಿರ್ಧರಿಸಿದ್ದು, ತೀವ್ರ ವಾಗ್ವಾದ ನಡೆಯುವ ನಿರೀಕ್ಷೆಯಿದೆ. ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನ
Session


ನವದೆಹಲಿ, 21 ಜುಲೈ (ಹಿ.ಸ.) :

ಆ್ಯಂಕರ್ : ಸಂಸತ್ತಿನ ಮಳೆಗಾಲದ ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ವಿರೋಧ ಪಕ್ಷಗಳು ಹಲವಾರು ಪ್ರಮುಖ ವಿಷಯಗಳಲ್ಲಿ ಸರ್ಕಾರವನ್ನು ಸಿಲುಕಿಸಲು ನಿರ್ಧರಿಸಿದ್ದು, ತೀವ್ರ ವಾಗ್ವಾದ ನಡೆಯುವ ನಿರೀಕ್ಷೆಯಿದೆ.

ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿ 'ಆಪರೇಷನ್ ಸಿಂಧೂರ್' ನಂತರ ನಡೆಯುತ್ತಿರುವ ಮೊದಲ ಸಂಸತ್ ಅಧಿವೇಶನ ಇದಾಗಿದೆ. ಬೆಳಿಗ್ಗೆ 11 ಗಂಟೆಗೆ ಅಧಿಕೃತವಾಗಿ ಆರಂಭವಾಗಲಿದ್ದು ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇಂದಿನಿಂದ ಆಗಸ್ಟ್ 21 ರವರೆಗೆ ನಡೆಯುವ ಅಧಿವೇಶನವು 32 ದಿನಗಳಲ್ಲಿ 21 ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಂಸತ್ತಿನ ಎರಡೂ ಸದನಗಳನ್ನು ಆಗಸ್ಟ್ 12 ರಿಂದ ಆಗಸ್ಟ್ 17 ರವರೆಗೆ ಮುಂದೂಡಲಾಗುವುದು ಮತ್ತು ಆಗಸ್ಟ್ 18 ರಂದು ಮತ್ತೆ ಸದನ ಸಭೆ ಸೇರಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande