ಮಳೆಗಾಲ ಅಧಿವೇಶನ: ರಾಷ್ಟ್ರದ ವಿಜಯೋತ್ಸವ, ಪ್ರಧಾನಿ ಮೋದಿ
ನವದೆಹಲಿ, 21 ಜುಲೈ (ಹಿ.ಸ.): ಆ್ಯಂಕರ್: ಸಂಸತ್ತಿನ ಮಳೆಗಾಲ ಅಧಿವೇಶನ ಆರಂಭಕ್ಕೂ ಮೊದಲು ಸಂಸತ್ತ ಆವರಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪಕ್ಷಾತೀತವಾಗಿ ದೇಶದ ಹಿತಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದರು. ಇತ್ತೀಚಿನ ಬಾಹ್ಯಾಕಾಶ, ಮಿಲಿಟರಿ ಮತ್ತು ಆರ್ಥಿಕ ಕ್ಷೇ
Pm


ನವದೆಹಲಿ, 21 ಜುಲೈ (ಹಿ.ಸ.):

ಆ್ಯಂಕರ್:

ಸಂಸತ್ತಿನ ಮಳೆಗಾಲ ಅಧಿವೇಶನ ಆರಂಭಕ್ಕೂ ಮೊದಲು ಸಂಸತ್ತ ಆವರಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪಕ್ಷಾತೀತವಾಗಿ ದೇಶದ ಹಿತಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕೆಂದು ಮನವಿ ಮಾಡಿದರು. ಇತ್ತೀಚಿನ ಬಾಹ್ಯಾಕಾಶ, ಮಿಲಿಟರಿ ಮತ್ತು ಆರ್ಥಿಕ ಕ್ಷೇತ್ರಗಳ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಈ ಅಧಿವೇಶನವನ್ನು ರಾಷ್ಟ್ರದ ವಿಜಯೋತ್ಸವವೆಂದು ವರ್ಣಿಸಿದರು.

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತ್ರಿವರ್ಣ ಧ್ವಜ ಹಾರಿದ ಹಿನ್ನೆಲೆಯಲ್ಲಿ ಭಾರತ ಹೆಮ್ಮೆಪಡುವ ಕ್ಷಣವಾಗಿದೆ ಎಂದು ಮೋದಿ ಹೇಳಿದರು. ಪಹಲ್ಗಾಮ್ ಎನ್‌ಕೌಂಟರ್ ಮತ್ತು ಆಪರೇಷನ್ ಸಿಂಧೂರ್ ಬಳಿಕ ಭಾರತ ಜಾಗತಿಕ ಮಟ್ಟದಲ್ಲಿ ಭದ್ರತಾ ವಿಷಯದಲ್ಲಿ ಪಾಕಿಸ್ತಾನದ ಕುತಂತ್ರವನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.

ಪಕ್ಷದ ಹಿತಾಸಕ್ತಿಯಲ್ಲಿ ನೀವು ಮತಗಳನ್ನು ಗೆಲ್ಲದಿರಬಹುದು, ಆದರೆ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಹೃದಯಗಳನ್ನು ಗೆಲ್ಲಬಹುದು ಎಂಬ ಮಾತಿನ ಮೂಲಕ ಪ್ರತಿಪಕ್ಷಗಳಿಗೆ ಪ್ರಧಾನಿ ನಾಯಕತ್ವದ ಆಶಯವನ್ನು ವ್ಯಕ್ತಪಡಿಸಿದರು.

ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಯಲ್ಲಿ 100% 'ಮೇಡ್ ಇನ್ ಇಂಡಿಯಾ' ಶಸ್ತ್ರಾಸ್ತ್ರ ಬಳಕೆ ದೇಶದ ಸಾಮರ್ಥ್ಯವನ್ನು ತೋರಿದೆ. ನಕ್ಸಲ್ ಪ್ರಭಾವವಿರುವ ಜಿಲ್ಲೆಗಳ ಸಂಖ್ಯೆ ಕುಗ್ಗುತ್ತಿದೆ. ಭಾರತ ಆರ್ಥಿಕವಾಗಿ ಮೂರನೇ ಸ್ಥಾನವನ್ನು ಪಡೆದಿದ್ದು, ಯುಪಿಐ ಮೂಲಕ ಫಿನ್‌ಟೆಕ್ ಕ್ಷೇತ್ರದಲ್ಲಿ ಜಾಗತಿಕ ಗುರುತನ್ನು ಗಳಿಸಿದೆ. 90 ಕೋಟಿ ಜನರು ಸಾಮಾಜಿಕ ಭದ್ರತೆಗೆ ಒಳಪಟ್ಟಿದ್ದಾರೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande