ಉಜ್ಜಯಿನಿಯಲ್ಲಿ ಮಹಾಕಾಳೇಶ್ವರನ ಮೆರವಣಿಗೆ
ಉಜ್ಜಯಿನಿ, 21 ಜುಲೈ (ಹಿ.ಸ.): ಆ್ಯಂಕರ್: ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಎರಡನೇ ಮೆರವಣಿಗೆ ಇಂದು ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಆರಂಭವಾಗಲಿದೆ. ಭಗವಾನ್ ಮಹಾಕಾಳನು ಚಂದ್ರಮೌಳೇಶ್ವರ ರೂಪದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಹಾಗೂ ಮನಮೋಹನ ರೂಪದಲ್ಲಿ ಆನೆಯ ಮೇಲೆ ಭಕ
Mahakala


ಉಜ್ಜಯಿನಿ, 21 ಜುಲೈ (ಹಿ.ಸ.):

ಆ್ಯಂಕರ್:

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಶ್ರಾವಣ ಮಾಸದ ಎರಡನೇ ಮೆರವಣಿಗೆ ಇಂದು ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಆರಂಭವಾಗಲಿದೆ. ಭಗವಾನ್ ಮಹಾಕಾಳನು ಚಂದ್ರಮೌಳೇಶ್ವರ ರೂಪದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಹಾಗೂ ಮನಮೋಹನ ರೂಪದಲ್ಲಿ ಆನೆಯ ಮೇಲೆ ಭಕ್ತರಿಗೆ ದರ್ಶನ ನೀಡಲಿದ್ದಾರೆ.

ಮೆರವಣಿಗೆ ಮಹಾಕಾಳ ದೇವಾಲಯದಿಂದ ಪ್ರಾರಂಭವಾಗಿ ರಾಮ್ ಘಾಟ್‌ವರೆಗೆ ಸಾಗಲಿದೆ. ಶಿಪ್ರಾ ನದಿಯ ನೀರಿನಿಂದ ಅಭಿಷೇಕದ ಬಳಿಕ ಮೆರವಣಿಗೆ ಹಿಂದಿರುಗಲಿದೆ. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ಎಂಟು ಬುಡಕಟ್ಟು ಹಾಗೂ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪ್ರದರ್ಶನ ನೀಡಲಿದ್ದು, ಲೈವ್ ಎಲ್‌ಇಡಿ ರಥದ ಮೂಲಕ ನೇರ ಪ್ರಸಾರ ವ್ಯವಸ್ಥೆಯೂ ಮಾಡಲಾಗಿದೆ. ಭಕ್ತರಿಗೆ ಸರಿಯಾದ ಮಾರ್ಗದರ್ಶನ ನೀಡಲಾಗಿದ್ದು, ಮೆರವಣಿಗೆ ಸಮಯದಲ್ಲಿ ಶಿಸ್ತು ಪಾಲನೆಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande