ನವದೆಹಲಿ, 21 ಜುಲೈ (ಹಿ.ಸ.) :
ಆ್ಯಂಕರ್ : ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಮಹಾಭಿಯೋಗ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಪ್ರಸ್ತಾವನೆಯನ್ನು 145 ಮಂದಿ ಲೋಕಸಭಾ ಸದಸ್ಯರು ಸಹಿ ಮಾಡಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇಂದು ಸಲ್ಲಿಸಿದರು.
ನ್ಯಾಯಮೂರ್ತಿಯ ದೆಹಲಿ ನಿವಾಸದಲ್ಲಿ ಮಾರ್ಚ್ 15ರಂದು ಬೆಂಕಿ ಸಂಭವಿಸಿ, ಅರ್ಧ ಸುಟ್ಟ ನೋಟುಗಳು ಪತ್ತೆಯಾದ ಬಳಿಕ, ಅವರ ವಿರುದ್ಧ ತನಿಖೆಗೆ ಕೂಗು ಎದ್ದಿತ್ತು. ಬಳಿಕ ಅವರನ್ನು ದೆಹಲಿ ಹೈಕೋರ್ಟ್‌ನಿಂದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.
ಭಾರತ ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಪ್ರಕಾರ, ಮಹಾಭಿಯೋಗ ಪ್ರಕ್ರಿಯೆ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಪ್ರಸ್ತಾವನೆಗೆ ಕಾಂಗ್ರೆಸ್, ಡಿಎಂಕೆ, ತೃಣಮೂಲ, ಜೆಡಿಎಸ್, ಜೆಎಸಿಪಿ, ಅಸ್ಸಾಂ ಗಣ ಪರಿಷತ್, ಶಿವಸೇನೆ ಸೇರಿದಂತೆ ಹಲವಾರು ಪಕ್ಷಗಳ ಸಂಸದರು ಸಹಿ ಮಾಡಿದ್ದಾರೆ. ಬಿಜೆಪಿ ಮಾತ್ರ ಈ ಪ್ರಕ್ರಿಯೆಯಿಂದ ದೂರವಿದೆ.
ರಾಹುಲ್ ಗಾಂಧಿ, ಟಿಆರ್ ಬಾಲು, ಸುಪ್ರಿಯಾ ಸುಳೆ, ರವಿಶಂಕರ್ ಪ್ರಸಾದ್, ಅನುರಾಗ್ ಠಾಕೂರ್, ರಾಜೀವ್ ಪ್ರತಾಪ್ ರೂಡಿ, ಪಿಪಿ ಚೌಧರಿ ಸೇರಿದಂತೆ ಹಲವು ಪ್ರಮುಖ ನಾಯಕರು ಸಹಿ ಹಾಕಿದ್ದಾರೆ.
ನಿಯಮಗಳ ಪ್ರಕಾರ, ಲೋಕಸಭೆಯಲ್ಲಿ ಕನಿಷ್ಠ 100 ಮತ್ತು ರಾಜ್ಯಸಭೆಯಲ್ಲಿ 50 ಸಂಸದರು ಸಹಿ ಮಾಡಿದರೆ ಮಾತ್ರ ನ್ಯಾಯಮೂರ್ತಿಗೆ ವಿರುದ್ಧ ಮಹಾಭಿಯೋಗ ಪ್ರಸ್ತಾವನೆ ಮಂಡಿಸಬಹುದು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa