ನವದೆಹಲಿ, 21 ಜುಲೈ (ಹಿ.ಸ.) :
ಆ್ಯಂಕರ್ : ಮಳೆಗಾಲ ಅಧಿವೇಶನದ ಮೊದಲ ದಿನ ರಾಜ್ಯ ಸಭೆಯ ಅಧ್ಯಕ್ಷ ಜಗದೀಪ್ ಧಂಖರ್ ಐದು ಹೊಸ ಸದಸ್ಯರಿಗೆ ಸಂಸತ್ ಭವನದಲ್ಲಿ ಪ್ರಮಾಣವಚನ ಬೋಧಿಸಿದರು.
ಮಾಜಿ ಕೇಂದ್ರ ಸಚಿವ ಬೀರೇಂದ್ರ ಪ್ರಸಾದ್ ಬೈಶ್ಯ, ಕಾನದ್ ಪುರ್ಕಾಯಸ್ಥ, ಡಾ. ಮೀನಾಕ್ಷಿ ಜೈನ್, ಸಿ. ಸದಾನಂದನ್ ಮಾಸ್ಟರ್ ಹಾಗೂ ಹರ್ಷವರ್ಧನ್ ಶ್ರಿಂಗ್ಲಾ. ಡಾ. ಜೈನ್, ಸದಾನಂದನ್ ಮತ್ತು ಶ್ರಿಂಗ್ಲಾ ಅವರನ್ನು ನಾಮನಿರ್ದೇಶಿತವಾಗಿ ರಾಜ್ಯಸಭೆಗೆ ನೇಮಕ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಧಂಖರ್ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಸಂಸತ್ತಿಗೆ ಅವರು ನೀಡುವ ಕೊಡುಗೆಗಾಗಿ ಶುಭಾಶಯ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa