ಬಳ್ಳಾರಿ, 18 ಜುಲೈ (ಹಿ.ಸ.) :
ಆ್ಯಂಕರ್ : ಲೇಖಕ ಸಿದ್ದರಾಮ ಕಲ್ಮಠ ಅವರು ರಚಿಸಿರುವ `ಕರ್ಪೂರದ ಬೆಳಗು' ಕೃತಿ ಬಿಡುಗಡೆ ಕಾರ್ಯಕ್ರಮವು ಜುಲೈ 22 ರ ಮಂಗಳವಾರ ಸಂಜೆ 5:30ಕ್ಕೆ ಹೀರದ ಸೂಗಮ್ಮ ಪ್ರೌಢಶಾಲೆಯ ಆವರಣದಲ್ಲಿ ನಡೆಯಲಿದೆ.
ಮನ್ನಿರಂಜನ ಪ್ರಣವಸ್ವರೂಪಿ ಕಲ್ಯಾಣ ಮಹಾಸ್ವಾಮಿಗಳು ಕಾಯ್ಕ್ರಮದ ಸಾನಿಧ್ಯವಹಿಸುವರು. ವಿಧಾನಪರಿಷತ್ ಸದಸ್ಯರಾದ ವೈ.ಎಂ. ಸತೀಶ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಣೇಕಲ್ಲು ಮಹಾಂತೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ ಅವರು `ಕರ್ಪೂರದ ಬೆಳಗು' ನಾಟಕ ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಡಾ. ಪಿ. ದಿವಾಕರ ನಾರಾಯಣ ಅವರು ಕೃತಿಯ ಕುರಿತು ಮಾತಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮರಿಸ್ವಾಮಿ ಮಠದ ವಾಗೀಶ ಶರ್ಮ, ಹೀರದ ಸೂಗಮ್ಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಮೇಟಿ ಪಂಪನಗೌಡ, ಕುಡತಿನಿ ಸತ್ಸಂಗ ಆಶ್ರಮದ ಪಲ್ಲೇದ ಪಂಪಾಪತೆಪ್ಪ, ರಂಗ ತೋರಣದ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಮತ್ತು ನಿವೃತ್ತ ಅಭಿಯಂತರ ಕೇಣಿ ಬಸಪ್ಪ, ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಕಲ್ಗುಡಿ ಮಂಜುನಾಥ, ಸಮಾಜಸೇವಕ ಜಿ. ಮಹಾಲಿಂಗಯ್ಯ ಮತ್ತು ವೀರಶೈವ ತರುಣ ಸಂಘದ ಅಧ್ಯಕ್ಷ ನಂದೀಶ್ ಮಠಂ ಅವರು ಪಾಲ್ಗೊಳ್ಳಲಿದ್ದಾರೆ.
ಜಾನಪದ ಗಾರುಡಿಗ ಯಲ್ಲನಗೌಡ ಶಂಕರ ಬಂಡೆ ಮತ್ತು ಜಡೇಶ್ ಎಮ್ಮಿಗನೂರು ಅವರ ತಂಡದಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಲೇಖಕ ಸಿದ್ದರಾಮ ಕಲ್ಮಠ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್