ನಾಳೆ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರಿಗೆ ಅಭಿನಂದನೆ
ಬಳ್ಳಾರಿ, 18 ಜುಲೈ (ಹಿ.ಸ.) : ಆ್ಯಂಕರ್ : ಕೇಂದ್ರ ಸಾಹಿತ್ಯ ಅಕಾಡೆಮಿಯು ಮಕ್ಕಳ ಸಾಹಿತ್ಯಕ್ಕೆ ನೀಡುವ `ಬಾಲ ಸಾಹಿತ್ಯ'' ಪುರಸ್ಕಾರಕ್ಕೆ ಆಯ್ಕೆಯಾಗಿರುವ ಶಿಕ್ಷಕ, ಬಳ್ಳಾರಿಯ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಅಡಾಕ್ ಸಮಿತಿಯು ಪತ್ರಿಕಾ
ಬಳ್ಳಾರಿ : ಕಾನಿಪದಿಂದ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರಿಗೆ ಅಭಿನಂದನೆ


ಬಳ್ಳಾರಿ : ಕಾನಿಪದಿಂದ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರಿಗೆ ಅಭಿನಂದನೆ


ಬಳ್ಳಾರಿ, 18 ಜುಲೈ (ಹಿ.ಸ.) :

ಆ್ಯಂಕರ್ : ಕೇಂದ್ರ ಸಾಹಿತ್ಯ ಅಕಾಡೆಮಿಯು ಮಕ್ಕಳ ಸಾಹಿತ್ಯಕ್ಕೆ ನೀಡುವ `ಬಾಲ ಸಾಹಿತ್ಯ' ಪುರಸ್ಕಾರಕ್ಕೆ ಆಯ್ಕೆಯಾಗಿರುವ ಶಿಕ್ಷಕ, ಬಳ್ಳಾರಿಯ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾ ಅಡಾಕ್ ಸಮಿತಿಯು ಪತ್ರಿಕಾ ಭವನದಲ್ಲಿ ನಾಳೆ ಬೆಳಗ್ಗೆ 10.30ಕ್ಕೆ ಸನ್ಮಾನಿಸಿ - ಅಭಿನಂದಿಸಲಿದೆ.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಎನ್. ವೀರಭದ್ರಗೌಡ ಅವರು ಈ ಮಾಹಿತಿ ನೀಡಿದ್ದು, ಪತ್ರಿಕಾ ಭವನದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಡಾ. ಶಿವಲಿಂಗಪ್ಪ ಹಂದಿಹಾಳ್ ಅವರ ಸಾಹಿತ್ಯ ಶ್ರಮ, ಸಾಧನೆಗಳು ಇನ್ನಿತರೆಗಳ ಕುರಿತು ಆಪ್ತ ಮಾತುಕತೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಾಹಿತ್ಯಾಸಕ್ತರು, ಸಂಘದ ಸದಸ್ಯರು ಆಗಮಿಸಲು ಜಿಲ್ಲಾ ಅಡಾಕ್ ಸಮಿತಿಯ ಸದಸ್ಯರಾದ ಕೆ. ಮಲ್ಲಯ್ಯ ಮೋಕಾ ಮತ್ತು ವೆಂಕೋಬಿ ಸಂಗನಕಲ್ಲು ಅವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande