ಜಾಗತಿಕ ಮಾರುಕಟ್ಟೆಯಿಂದ ದುರ್ಬಲ ಸಂಕೇತ
ನವದೆಹಲಿ, 16 ಜುಲೈ (ಹಿ.ಸ.) : ಆ್ಯಂಕರ್ : ಜಾಗತಿಕ ಹೂಡಿಕೆ ಮಾರುಕಟ್ಟೆಗಳು ಇಂದು ದುರ್ಬಲತೆಯ ಲಕ್ಷಣಗಳನ್ನು ತೋರಿಸುತ್ತಿವೆ. ಅಮೆರಿಕದ ಡೌ ಜೋನ್ಸ್ 450 ಅಂಕಗಳ ಕುಸಿತ ಕಂಡಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿಯೂ ಮಾರಾಟದ ಒತ್ತಡತೀವ್ರಗೊಂಡಿದೆ. ಎಫ್ ಟಿಎಸ್ಇ,ಸಿಎಸಿ ಮತ್ತು ಡಿಎಎಕ್ಸ ಸೂಚ್ಯಂಕಗಳು ಕ್ರಮವಾಗ
Global markets


ನವದೆಹಲಿ, 16 ಜುಲೈ (ಹಿ.ಸ.) :

ಆ್ಯಂಕರ್ : ಜಾಗತಿಕ ಹೂಡಿಕೆ ಮಾರುಕಟ್ಟೆಗಳು ಇಂದು ದುರ್ಬಲತೆಯ ಲಕ್ಷಣಗಳನ್ನು ತೋರಿಸುತ್ತಿವೆ. ಅಮೆರಿಕದ ಡೌ ಜೋನ್ಸ್ 450 ಅಂಕಗಳ ಕುಸಿತ ಕಂಡಿದ್ದು, ಯುರೋಪ್ ಮಾರುಕಟ್ಟೆಗಳಲ್ಲಿಯೂ ಮಾರಾಟದ ಒತ್ತಡತೀವ್ರಗೊಂಡಿದೆ. ಎಫ್ ಟಿಎಸ್ಇ,ಸಿಎಸಿ ಮತ್ತು ಡಿಎಎಕ್ಸ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.67, 0.54 ಮತ್ತು 0.42 ರಷ್ಟು ಕುಸಿತ ಕಂಡಿವೆ.

ಅಮೆರಿಕದ ಚಿಲ್ಲರೆ ಹಣದುಬ್ಬರದ ದತ್ತಾಂಶದಲ್ಲಿ ಸುಧಾರಣೆ ಕಂಡುಬಂದರೂ, ಎಸ್‌ & ಪಿ 500 ಸೂಚ್ಯಂಕ ಶೇಕಡಾ 0.40 ರಷ್ಟು ಇಳಿಕೆಯೊಂದಿಗೆ ಮುಕ್ತಾಯಗೊಂಡಿತು. ಆದರೆ ನಾಸ್ಡಾಕ್ ಶೇಕಡಾ 0.18 ರಷ್ಟು ಏರಿಕೆಯಾಗಿ ಮುಕ್ತಾಯಗೊಂಡಿದೆ.

ಇತ್ತ ಏಷ್ಯಾದಲ್ಲಿ ಮಿಶ್ರ ವಹಿವಾಟು ನಡೆಯುತ್ತಿದೆ. ನಿಕ್ಕಿ, ಹ್ಯಾಂಗ್ ಸೆಂಗ್, ತೈವಾನ್, ಜಕಾರ್ತಾ ಮತ್ತು ಸೆಟ್ ಸೂಚ್ಯಂಕಗಳು ಏರಿಕೆಯನ್ನು ದಾಖಲಿಸಿದ್ದರೆ, ನಿಫ್ಟಿ, ಕೊಸ್ಪಿ ಮತ್ತು ಶಾಂಘೈ ಸೂಚ್ಯಂಕಗಳು ದೌರ್ಬಲ್ಯವನ್ನೂ ತೋರಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande