11 ರಾಜ್ಯಗಳಲ್ಲಿ 40 ಕೋಟಿ ವಂಚನೆ ಮಾಡಿದ ಆರೋಪಿ ಬಂಧನ
ಕಾರವಾರ, 16 ಜುಲೈ (ಹಿ.ಸ.) : ಆ್ಯಂಕರ್ : ಡಿಜಿಟಲ್ ಅರೆಸ್ಟ್ ಮತ್ತು ಹೂಡಿಕೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 29 ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಸಿಇಎನ್ ಪೊಲೀಸರು ಬಿಹಾರದ ಪಾಟ್ನಾದಿಂದ ಬಂಧಿಸಿದ್ದಾರೆ. ಬಂಧಿತ ಆರೋಪಿ ಹರ್ದೀಪ್ ಸಿಂಗ್ (39) ಬಿಹಾರದ ನ್ಯೂ
Arrest


ಕಾರವಾರ, 16 ಜುಲೈ (ಹಿ.ಸ.) :

ಆ್ಯಂಕರ್ : ಡಿಜಿಟಲ್ ಅರೆಸ್ಟ್ ಮತ್ತು ಹೂಡಿಕೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 29 ಪ್ರಕರಣಗಳಲ್ಲಿ ಬೇಕಾಗಿದ್ದ ಪ್ರಮುಖ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಸಿಇಎನ್ ಪೊಲೀಸರು ಬಿಹಾರದ ಪಾಟ್ನಾದಿಂದ ಬಂಧಿಸಿದ್ದಾರೆ.

ಬಂಧಿತ ಆರೋಪಿ ಹರ್ದೀಪ್ ಸಿಂಗ್ (39) ಬಿಹಾರದ ನ್ಯೂ ಜಕನ್‌ಪುರ ನಿವಾಸಿ ಬಂಧಿತನಾಗಿದ್ದು. ಈತನ ವಿರುದ್ಧ 11 ರಾಜ್ಯಗಳಲ್ಲಿ ವಿವಿಧ ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗಿವೆ.

2024ರ ಅಕ್ಟೋಬರ್ 23ರಂದು ಕಾರವಾರದ ವಿಲ್ಸನ್ ಫರ್ನಾಂಡಿಸ್ ಅವರ ಹೆಸರಿನಲ್ಲಿ ಎಂಡಿಎಂಎ ಮಾದಕವಸ್ತು ಪಾರ್ಸಲ್ ಬಂದಿದೆ ಎಂಬ ನೆಪದಲ್ಲಿ ಸುಳ್ಳು ಕರೆ ನೀಡಿ ಹಣ ವಂಚಿಸಲಾಗಿದೆ. ಈ ಕುರಿತು ಕಾರವಾರ ಸಿಇಎನ್ ಠಾಣೆಯಲ್ಲಿ ಸಂಬಂಧಪಟ್ಟ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಹರ್ದೀಪ್ ಸಿಂಗ್ ತಮಿಳುನಾಡಿನಲ್ಲಿ ₹9.09 ಕೋಟಿ, ಆಂಧ್ರಪ್ರದೇಶದಲ್ಲಿ ₹2.47 ಕೋಟಿ, ಬೆಂಗಳೂರಿನ ಮಾರತಹಳ್ಳಿಯಲ್ಲಿ ₹80 ಲಕ್ಷ, ಪುಲಕೇಶಿನಗರದಲ್ಲಿ ₹74.60 ಲಕ್ಷ ಸೇರಿದಂತೆ ಒಟ್ಟು ₹40.95 ಕೋಟಿ ಮೌಲ್ಯದ ವಂಚನೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.

ಆರೋಪಿಯು 8 ಉಳಿತಾಯ ಖಾತೆ ಹಾಗೂ 2 ಚಾಲ್ತಿ ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ ಎಂ. ಮಾರ್ಗದರ್ಶನದಲ್ಲಿ, ಸಿಇಎನ್ ಉಪಾಧ್ಯಕ್ಷಕಿ ಬಿ. ಅಶ್ವಿನಿ ನೇತೃತ್ವದಲ್ಲಿ ವಿಶೇಷ ತಂಡ ಬಿಹಾರ ತೆರಳಿ ಆರೋಪಿಯನ್ನು ಜುಲೈ 12ರಂದು ಬಂಧಿಸಿ ಕಾರವಾರಕ್ಕೆ ಕರೆತಂದಿದೆ.

ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande