ಹಿರಿಯ ಮ್ಯಾರಥಾನ್ ಓಟಗಾರ ಫೌಜಾಸಿಂಗ್ ನಿಧನಕ್ಕೆ:ಪ್ರಧಾನಿ ಸಂತಾಪ
ನವದೆಹಲಿ, 15 ಜುಲೈ (ಹಿ.ಸ.) : ಆ್ಯಂಕರ್ : ಹಿರಿಯ ಮ್ಯಾರಥಾನ್ ಓಟಗಾರ ಫೌಜಾಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಫೌಜಾ ಸಿಂಗ್ ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಭಾರತದ ಯುವಕರಿಗೆ ಫಿಟ್ನೆಸ್ ಕುರಿತು ಅವರು ತಮ್ಮ ಸಲಹೆಗಳ ಮೂಲಕ ಸ್ಫೂ
Fouja singh


ನವದೆಹಲಿ, 15 ಜುಲೈ (ಹಿ.ಸ.) :

ಆ್ಯಂಕರ್ : ಹಿರಿಯ ಮ್ಯಾರಥಾನ್ ಓಟಗಾರ ಫೌಜಾಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಫೌಜಾ ಸಿಂಗ್ ಅವರು ವಿಶಿಷ್ಟ ವ್ಯಕ್ತಿತ್ವ ಹೊಂದಿದ್ದು, ಭಾರತದ ಯುವಕರಿಗೆ ಫಿಟ್ನೆಸ್ ಕುರಿತು ಅವರು ತಮ್ಮ ಸಲಹೆಗಳ ಮೂಲಕ ಸ್ಫೂರ್ತಿ ತುಂಬಿದ್ದರು. ಅವರು ಅದ್ಭುತ ದೃಢನಿಶ್ಚಯ ಹೊಂದಿದ್ದ ಅಸಾಧಾರಣ ಕ್ರೀಡಾಪಟುವಾಗಿದ್ದರು. ಅವರ ನಿಧನದ ಸುದ್ದಿ ನೋವುಂಟ ಮಾಡಿದೆ. ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತದ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪ ತಿಳಿಸುತ್ತೇನೆ ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande