ಲಕ್ನೋ : ನ್ಯಾಯಾಲಯಕ್ಕೆ ಹಾಜರಾಗಲು ಆಗಮಿಸಿದ ರಾಹುಲ್ ಗಾಂಧಿ
ಲಕ್ನೋ, 15 ಜುಲೈ (ಹಿ.ಸ.) : ಆ್ಯಂಕರ್ : ಲೋಕ ಸಭೆ ಪ್ರತಿಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಉತ್ತರ ಪ್ರದೇಶದ ಲಕ್ನೋ ತಲುಪಿದ್ದು, ಅವರು ಇಲ್ಲಿನ ಸಂಸದ-ಶಾಸಕರ ವಿಶೇಷ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುತ್ತಿದ್ದಾರೆ. ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ರಾಜ
Rahul gandhi


ಲಕ್ನೋ, 15 ಜುಲೈ (ಹಿ.ಸ.) :

ಆ್ಯಂಕರ್ : ಲೋಕ ಸಭೆ ಪ್ರತಿಪಕ್ಷದ ನಾಯಕ ಮತ್ತು ಹಿರಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮಂಗಳವಾರ ಉತ್ತರ ಪ್ರದೇಶದ ಲಕ್ನೋ ತಲುಪಿದ್ದು, ಅವರು ಇಲ್ಲಿನ ಸಂಸದ-ಶಾಸಕರ ವಿಶೇಷ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗುತ್ತಿದ್ದಾರೆ.

ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ರಾಜ್ಯಸಭೆಯ ಉಪ ನಾಯಕ ಪ್ರಮೋದ್ ತಿವಾರಿ, ಹಿರಿಯ ನಾಯಕ ಪಿ.ಎಲ್. ಪುನಿಯಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ನಾಯಕಿ ಆರಾಧನಾ ಮಿಶ್ರಾ ಮೋನಾ, ಸಂಸದ ಕಿಶೋರಿ ಲಾಲ್ ಶರ್ಮಾ ಹಾಗೂ ವಕ್ತಾರ ಅಂಶು ಅವಸ್ಥಿ ಸೇರಿ ಹಲವರು ರಾಹುಲ್ ಗಾಂಧಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.

ವಿಮಾನ ನಿಲ್ದಾಣದಿಂದ ನೇರವಾಗಿ ನ್ಯಾಯಾಲಯದತ್ತ ತೆರಳಿದ ರಾಹುಲ್ ಗಾಂಧಿಯವರ ಪರವಾಗಿ, ಅವರ ವಕೀಲರು ಶರಣಾಗತಿ ಮತ್ತು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಸಂಬಂಧಿತ ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರ ಮೇಲೆ ನಿರ್ದೇಶನವಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತಮುತ್ತ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande