ಛತ್ತಿಸಗಢ ಹೋಟೆಲ್ ಉದ್ಯಮಿ ವಿಜಯ್ ಅಗರ್‌ವಾಲ್ ಮನೆ ಮೇಲೆ ಇಡಿ ದಾಳಿ
ರಾಯ್‌ಪುರ, 15 ಜುಲೈ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಪ್ರಸಿದ್ಧ ಉದ್ಯಮಿ ಹಾಗೂ ಸಾಗರ್ ಹೋಟೆಲ್ ಮಾಲೀಕ ವಿಜಯ್ ಅಗರ್‌ವಾಲ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಇಂದು ಬೆಳಿಗ್ಗೆ ದಾಳಿ ನಡೆಸಿದೆ. ಬೆಳಗ್ಗೆ 6 ಗಂಟೆಗೆ ಮೂರು ವಾಹನಗಳಲ್ಲಿ ಬಂದ ಇಡಿ ಅಧಿಕಾರಿಗಳು ಮತ
End raid


ರಾಯ್‌ಪುರ, 15 ಜುಲೈ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಪ್ರಸಿದ್ಧ ಉದ್ಯಮಿ ಹಾಗೂ ಸಾಗರ್ ಹೋಟೆಲ್ ಮಾಲೀಕ ವಿಜಯ್ ಅಗರ್‌ವಾಲ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಇಂದು ಬೆಳಿಗ್ಗೆ ದಾಳಿ ನಡೆಸಿದೆ. ಬೆಳಗ್ಗೆ 6 ಗಂಟೆಗೆ ಮೂರು ವಾಹನಗಳಲ್ಲಿ ಬಂದ ಇಡಿ ಅಧಿಕಾರಿಗಳು ಮತ್ತು ಸಿಆರ್ ಪಿಎಫ್ ಸಿಬ್ಬಂದಿ ದೀಪಕ್ ನಗರದ ಬಂಗಲೆ ಮೇಲೆ ದಾಳಿ ನಡೆಸಿದರು.

ವಿಜಯ್ ಅಗರ್‌ವಾಲ್, ದುರ್ಗ್-ಭಿಲಾಯಿ ಪ್ರದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಸಾಗರ್ ಗ್ರೂಪ್ ಮೂಲಕ ಅನೇಕ ಕಂಪನಿಗಳನ್ನು ನಿರ್ವಹಿಸುತ್ತಿದ್ದಾರೆ. ಅವರ ಕುಟುಂಬದವರನ್ನು ಛತ್ತೀಸ್‌ಗಢದ ಹಿಂದಿನ ಸರ್ಕಾರದ ಮಧ್ಯಾಹ್ನದ ಊಟ ಯೋಜನೆಗೆ ಸಂಬಂಧಿಸಿದ ಹಗರಣದಲ್ಲಿ ಪ್ರಮುಖ ಆರೋಪಿಗಳನಾಗಿಸಲಾಗಿದೆ . ರೈಲ್ ನೀರ್ ಹಗರಣದ ಜೊತೆಗೆ ಹಣಕಾಸಿನ ಅನಿಯಮಿತ ವಹಿವಾಟುಗಳಿಗೆ ಸಂಬಂಧಿಸಿದಂತೆ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮೂಲಗಳ ಪ್ರಕಾರ, ವಿಜಯ್ ಅಗರ್‌ವಾಲ್ ತಮಗೆ ಸೇರಿದ ಮೂರು ವಿಭಿನ್ನ ಕಂಪನಿಗಳ ಮೂಲಕ ವ್ಯವಹಾರ ನಡೆಸುತ್ತಿದ್ದಾರೆ. ಮೂರು ಸಹೋದರರ ಈ ಕುಟುಂಬ ಈಗ ವಿಭಜನೆಯಲ್ಲಿದ್ದು, ಎಲ್ಲರ ಮನೆಗಳ ಮೇಲೂ ಈ ದಾಳಿ ನಡೆದಿರುವುದು ತಿಳಿದುಬಂದಿದೆ. ಕುಟುಂಬವು ರಾಯ್‌ಪುರದಲ್ಲಿರುವ ಐಷಾರಾಮಿ ಕೋರ್ಟ್ಯಾರ್ಡ್ ಮ್ಯಾರಿಯಟ್ ಹೋಟೆಲ್‌ಗೂ ಮಾಲೀಕತ್ವ ಹೊಂದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande