ಜಾಗತಿಕ ಮಾರುಕಟ್ಟೆಗಳಲ್ಲಿ ದುರ್ಬಲತೆ, ಏಷ್ಯಾದಲ್ಲಿ ಮಿಶ್ರ ವಹಿವಾಟು
ನವದೆಹಲಿ, 14 ಜುಲೈ (ಹಿ.ಸ.) : ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲತೆ ಭಾರತೀಯ ಮಾರುಕಟ್ಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದು ಗೋಚರಿಸುತ್ತಿದೆ. ಅಮೆರಿಕದ ಡೌ ಜೋನ್ಸ್ ಫ್ಯೂಚರ್ಸ್ 196 ಅಂಕಗಳು (ಶೇಕಡಾ 0.44) ಇಳಿಕೆಯಲ್ಲಿದ್ದು, ಎಸ್‌ಅಂಡ್‌ಪಿ 500 ಶೇಕಡಾ 0.33 ಮತ್ತು ನಾಸ್ಡಾಕ್ ಶೇಕ
Global market


ನವದೆಹಲಿ, 14 ಜುಲೈ (ಹಿ.ಸ.) :

ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿನ ದುರ್ಬಲತೆ ಭಾರತೀಯ ಮಾರುಕಟ್ಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದು ಗೋಚರಿಸುತ್ತಿದೆ. ಅಮೆರಿಕದ ಡೌ ಜೋನ್ಸ್ ಫ್ಯೂಚರ್ಸ್ 196 ಅಂಕಗಳು (ಶೇಕಡಾ 0.44) ಇಳಿಕೆಯಲ್ಲಿದ್ದು, ಎಸ್‌ಅಂಡ್‌ಪಿ 500 ಶೇಕಡಾ 0.33 ಮತ್ತು ನಾಸ್ಡಾಕ್ ಶೇಕಡಾ 0.22ರಷ್ಟು ಕುಸಿದಿವೆ.

ಯುರೋಪಿನ ಪ್ರಮುಖ ಮಾರುಕಟ್ಟೆಗಳಾದ ಎಫ್ ಟಿಎಸ್ ಸಿ (0.39%), ಸಿಎಸಿ (0.93%) ಮತ್ತು ಡಿಎಎಕ್ಸ (0.83%) ಕೂಡ ಇಳಿಕೆಯಿಂದ ವಹಿವಾಟು ಮುಕ್ತಾಯಗೊಳಿಸಿವೆ.

ಈ ಮಧ್ಯೆ ಏಷ್ಯಾದ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ಒಟ್ಟು 9 ಪ್ರಮುಖ ಮಾರುಕಟ್ಟೆಗಳಲ್ಲಿ 5 ಹಸಿರು ಬಣ್ಣದಲ್ಲಿ ಲಾಭದೊಂದಿಗೆ ವಹಿವಾಟು ನಡೆಸುತ್ತಿದ್ದು, ಉಳಿದ 4 ಕೆಂಪು ಬಣ್ಣದಲ್ಲಿ ನಷ್ಟದೊಂದಿಗೆ ಸಾಗಿವೆ.

ಭಾರತದ ನಿಫ್ಟಿ 95 ಅಂಕಗಳಷ್ಟು (ಶೇಕಡಾ 0.38) ಇಳಿಕೆಯಲ್ಲಿದೆ. ಜಪಾನ್‌ನ ನಿಕ್ಕಿ (0.11%), ತೈವಾನ್ (0.75%) ಹಾಗೂ ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ (0.03%) ಕೂಡ ಸ್ವಲ್ಪ ಮಟ್ಟಿಗೆ ಕುಸಿದಿವೆ.

ಇತರೆ ಏಷ್ಯನ್ ಸೂಚ್ಯಂಕಗಳಾದ ಸಿಂಗಪೂರದ ಸ್ಟ್ರೈಟ್ಸ್ ಟೈಮ್ಸ್ (0.36%), ದಕ್ಷಿಣ ಕೊರಿಯಾದ ಕೋಸ್ಪಿ (0.40%), ಇಂಡೊನೇಷಿಯಾದ ಜಕಾರ್ತಾ ಕಾಂಪೋಸಿಟ್ (0.47%), ಚೀನಾದ ಶಾಂಘೈ ಕಾಂಪೋಸಿಟ್ (0.43%) ಹಾಗೂ ಥೈಲ್ಯಾಂಡಿನ ಸೆಟ್ ಸೂಚ್ಯಂಕ (0.17%) ಲಾಭದೊಂದಿಗೆ ವಹಿವಾಟು ನಡೆಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande