ಬೆಂಗಳೂರು, 14 ಜುಲೈ (ಹಿ.ಸ.) :
ಆ್ಯಂಕರ್ : ಕೇಂದ್ರ ಸಚಿವ ನಿತಿನ್ ಗಡ್ಕರಿ ಇಂದು ಕರ್ನಾಟಕ ಪ್ರವಾಸದಲ್ಲಿದ್ದು ರಾಜ್ಯದ ಪ್ರಾದೇಶಿಕ ಸಂಪರ್ಕ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ₹2000 ಕೋಟಿಗೂ ಹೆಚ್ಚು ವೆಚ್ಚದ 9 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ.
ಒಟ್ಟು 88 ಕಿಲೋಮೀಟರ್ ಉದ್ದದ ಈ ಯೋಜನೆಗಳು ಕರ್ನಾಟಕದ ರಸ್ತೆ ಜಾಲವನ್ನು ಇನ್ನಷ್ಟು ಬಲಪಡಿಸುವುದರ ಜೊತೆಗೆ, ಸಾಗಣೆ ದಾರಿ ಸುಗಮಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲಿವೆ. ಈ ಯೋಜನೆಗಳು ವಿವಿಧ ಭಾಗಗಳ ಸಂಪರ್ಕ ಸುಲಭವಾಗುವ ಮೂಲಕ ಪ್ರವಾಸೋದ್ಯಮ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಕ್ಕೂ ಬಹುಪಾಲು ಲಾಭ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa