ಗದಗ, 14 ಜುಲೈ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟದ ಮೇಲೆ ಗದಗ ಜಿಲ್ಲಾ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಆರು ಆರೋಪಿಗಳನ್ನು ಬಂಧಿಸಿ 6.7 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಮಾದಕದ್ರವ್ಯಗಳ ಮೌಲ್ಯ ಸುಮಾರು ₹6,70,000 ಎಂದು ಅಂದಾಜಿಸಲಾಗಿದೆ.
ಗದಗ ತಾಲೂಕಿನ ಕೋಟುಮಚಗಿ ಗ್ರಾಮದ ಬಾಪು ಹರಣಸಿಕಾರಿ ಹಾಗೂ ಚಂದಪ್ಪ ಹರಣಸಿಕಾರಿ, ಗದಗ ನರಸಾಪೂರದ ದಂಪತಿ ಗಾಯತ್ರಿ ಕಾಳೆ ಮತ್ತು ಮಾರುತಿ ಕಾಳೆ, ಬೆಟಗೇರಿಯ ಗೋಪಾಲ ಬಸವಾ ಮತ್ತು ಆಂಧ್ರ ಪ್ರದೇಶದ ಅನಂತಪುರ ಮೂಲದ ಕಲ್ಯಾಣ ಬಾಬು ಶಿಕಾರಿ ಬಂಧಿತ ಆರೋಪಿಗಳಾಗಿದ್ದಾರೆ.
ಗದಗ ಎಸ್ಪಿ ಬಿ.ಎಸ್. ನೇಮಗೌಡ ಅವರ ನೇತೃತ್ವದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳಿಂದ ಒಂದು ದ್ವಿಚಕ್ರ ವಾಹನ, ಆರು ಮೊಬೈಲ್ ಫೋನ್ ಹಾಗೂ ₹1,000 ನಗದು ಸಹ ವಶಪಡಿಸಲಾಗಿದೆ.
ಮಾದಕ ವಸ್ತು ಮಾರಾಟದಂತೆ ಯುವ ಸಮುದಾಯವನ್ನು ನಾಶಮಾಡುವ ದಂಧೆಕೋರರ ವಿರುದ್ಧ ಗದಗ ಪೊಲೀಸ್ ಇಲಾಖೆ ನಿರಂತರ ದಾಳಿಯನ್ನು ಮುಂದುವರಿಸಿದ್ದು, ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Lalita MP