ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ : ಬಾಲಕಿ ಸೇರಿದಂತೆ ಮೂವರಿಗೆ ಗಾಯ
ರಾಯ್‌ಪುರ್, 14 ಜುಲೈ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲಿಯರು ಹೂತ್ತಿದ್ದ ಐಇಡಿ ಸ್ಫೋಟದಲ್ಲಿ ಬಾಲಕಿ ಸೇರಿದಂತೆ ಮೂವರು ಗ್ರಾಮಸ್ಥರು ಗಾಯಗೊಂಡಿರುವ ಘಟನೆ ಸಂಭವಿಸಿದೆ. ಬಿಜಾಪುರದ ಮದ್ದೀದ್ ಪೊಲೀಸ್ ಠಾಣಾ ವ್ಯಾಪ್ತಿಯ ಧಂಗೋಲ್ ಗ್ರಾಮದ ಕಾಡಿನಲ್ಲಿ ಅಣಬೆ ಸಂಗ್ರಹಕ್ಕೆ ತೆ
ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ : ಬಾಲಕಿ ಸೇರಿದಂತೆ ಮೂವರಿಗೆ ಗಾಯ


ರಾಯ್‌ಪುರ್, 14 ಜುಲೈ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲಿಯರು ಹೂತ್ತಿದ್ದ ಐಇಡಿ ಸ್ಫೋಟದಲ್ಲಿ ಬಾಲಕಿ ಸೇರಿದಂತೆ ಮೂವರು ಗ್ರಾಮಸ್ಥರು ಗಾಯಗೊಂಡಿರುವ ಘಟನೆ ಸಂಭವಿಸಿದೆ.

ಬಿಜಾಪುರದ ಮದ್ದೀದ್ ಪೊಲೀಸ್ ಠಾಣಾ ವ್ಯಾಪ್ತಿಯ ಧಂಗೋಲ್ ಗ್ರಾಮದ ಕಾಡಿನಲ್ಲಿ ಅಣಬೆ ಸಂಗ್ರಹಕ್ಕೆ ತೆರಳಿದ ಗ್ರಾಮಸ್ಥರು ಐಇಡಿ ಸ್ಫೋಟಕ್ಕೆ ಒಳಗಾಗಿದ್ದಾರೆ ಎಂದು ಬಿಜಾಪುರ ಜಿಲ್ಲಾ ಎಸ್‌ಪಿ ಅಜಯ್ ಯಾದವ್ ಮಾಹಿತಿ ನೀಡಿದ್ದಾರೆ.

ಕವಿತಾ ಕುಡಿಯಂ (16), ತಂದೆ ನಾಗಯ್ಯ, ಕೊರ್ಸೆ ಸಂತೋಷ್ (26), ತಂದೆ ಲಚ್ಚಾ, ಚಿಡೆಮ್ ಕನ್ಹಯ್ಯ (24), ತಂದೆ ಕಿಸ್ತಾಯ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಬಿಜಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಸ್‌ಪಿ ಅಜಯ್ ಯಾದವ್ ಅವರು, ಅರಣ್ಯ ಪ್ರದೇಶಗಳಿಗೆ ತೆರಳುವಾಗ ಸಾರ್ವಜನಿಕರು ಎಚ್ಚರಿಕೆಯಿಂದ ನಡೆಯಬೇಕು ಹಾಗೂ ಅನುಮಾನಾಸ್ಪದ ವಸ್ತುಗಳ ಬಗ್ಗೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande