ಅಲ್ಪಸಂಖ್ಯಾತ ಯುವ ಉದ್ಯಮಿಗಳಿಗೆ ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ 2.0
ನವದೆಹಲಿ, 14 ಜುಲೈ (ಹಿ.ಸ.) : ಆ್ಯಂಕರ್ : ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 10ನೇ ಪುಣ್ಯತಿಥಿಯ ಅಂಗವಾಗಿ ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ 2.0 ಅನ್ನು ಘೋಷಿಸಿದೆ. ಜುಲೈ 27ರಿಂದ ರಾಷ್ಟ್ರವ್ಯಾಪಿ ಕಲಾಂ ಕೋ ಸಲಾಮ್ ಅಭಿಯಾನದ ಭಾಗವಾಗಿ ಈ ಪ
ಅಲ್ಪಸಂಖ್ಯಾತ ಯುವ ಉದ್ಯಮಿಗಳಿಗೆ ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ 2.0


ನವದೆಹಲಿ, 14 ಜುಲೈ (ಹಿ.ಸ.) :

ಆ್ಯಂಕರ್ : ಭಾರತೀಯ ಜನತಾ ಪಕ್ಷದ ಅಲ್ಪಸಂಖ್ಯಾತ ಮೋರ್ಚಾ, ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ 10ನೇ ಪುಣ್ಯತಿಥಿಯ ಅಂಗವಾಗಿ ಡಾ. ಕಲಾಂ ಸ್ಟಾರ್ಟ್ಅಪ್ ಯುವ ಪ್ರಶಸ್ತಿ 2.0 ಅನ್ನು ಘೋಷಿಸಿದೆ. ಜುಲೈ 27ರಿಂದ ರಾಷ್ಟ್ರವ್ಯಾಪಿ ಕಲಾಂ ಕೋ ಸಲಾಮ್ ಅಭಿಯಾನದ ಭಾಗವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಅಸಾಧಾರಣ ಕೌಶಲ್ಯ, ನಾವೀನ್ಯತೆ ಮತ್ತು ಉದ್ಯಮಶೀಲ ಮನೋಭಾವದಿಂದ ತನ್ನದೇ ಆದ ಉದ್ಯಮ ಸ್ಥಾಪಿಸಿದ ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ತಿಳಿಸಿದ್ದಾರೆ.

ಅರ್ಜಿದಾರರು https://minoritymorcha.bjp.org ವೆಬ್‌ಸೈಟ್ ಅಥವಾ ಮೋರ್ಚಾದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುವ QR ಕೋಡ್ ಮೂಲಕ ಜುಲೈ 16 ರಿಂದ ಆಗಸ್ಟ್ 06ರವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಆಗಸ್ಟ್ 06ರಿಂದ ಆಹ್ವಾನ ಪತ್ರ ನೀಡಲಾಗುತ್ತದೆ. ಅಂತಿಮ ಪ್ರಶಸ್ತಿ ಪ್ರದಾನ ಸಮಾರಂಭವು ಆಗಸ್ಟ್ 12ರಂದು, ಅಂತರರಾಷ್ಟ್ರೀಯ ಯುವ ದಿನದಂದು, ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆಯಲಿದೆ.

ಅಭಿಯಾನದ ಪೂರ್ವಸಿದ್ಧತೆಗಾಗಿ ಜುಲೈ 16 ರಂದು ಪ್ರಮುಖ ಅಧಿಕಾರಿಗಳ ಸಭೆ ಹಾಗೂ ಜುಲೈ 17 ರಂದು ಸಾಮಾಜಿಕ ಮಾಧ್ಯಮ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande