ಸರ್ರೆ (ಕೆನಡಾ), 11 ಜುಲೈ (ಹಿ.ಸ.) :
ಆ್ಯಂಕರ್ : ಹಾಸ್ಯನಟ ಕಪಿಲ್ ಶರ್ಮಾ ಅವರ ಕೆನಡಾದ ಕ್ಯಾಪ್ಸ್ ಕೆಫೆ ಮೇಲೆ ನಡೆದ ಗುಂಡಿನ ದಾಳಿಯಿಂದ ಭಾರತೀಯ ಉದ್ಯಮಿಗಳಲ್ಲಿ ಭೀತಿ ಮನೆ ಮಾಡಿದೆ.
ಭಾರತೀಯ ಸಮುದಾಯದ ಸದಸ್ಯರು ಕೆನಡಾ ಸರ್ಕಾರಕ್ಕೆ ಭದ್ರತಾ ವ್ಯವಸ್ಥೆ ಬಲಪಡಿಸುವಂತೆ ಮನವಿ ಮಾಡಿದ್ದಾರೆ.
ಗುರುವಾರ ನ್ಯೂಟನ್ ಪ್ರದೇಶದ ಕೆಫೆ ಮೇಲೆ ನಡೆದ ದಾಳಿಯಲ್ಲಿ ಯಾರಿಗೂ ಗಾಯವಾಗದಿದ್ದರೂ, ಸ್ಥಳಕ್ಕೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್‌ನಿಂದ ಸರ್ರೆಯಲ್ಲಿ ಹಿಂದೂ, ಪಂಜಾಬಿ ಸಮುದಾಯದ ವ್ಯಾಪಾರಸ್ಥರ ಮೇಲೆ ಐದು ಗುಂಡಿನ ದಾಳಿಗಳು ನಡೆದಿರುವುದಾಗಿ ವರದಿಯಾಗಿದೆ.
ಅಭಿವೃದ್ಧಿಪರ ಉದ್ಯಮಿ ಸತ್ವಿಂದರ್ ಶರ್ಮಾ ಮತ್ತು ಲಕ್ಷ್ಮಿ ನಾರಾಯಣ ದೇವಸ್ಥಾನದ ಅಧ್ಯಕ್ಷ ಕುಮಾರ್ ಇಬ್ಬರೂ ಈ ಹಿಂದೆ ದಾಳಿಗೆ ಬಲಿಯಾಗಿದ್ದರು. ಇದೀಗ, ಸಮುದಾಯದಲ್ಲಿ ಆತಂಕ ಹೆಚ್ಚಿದ್ದು, ಹಲವು ಉದ್ಯಮಿಗಳು ವ್ಯವಹಾರ ಮುಚ್ಚುವ ಬಗ್ಗೆ ಚಿಂತಿಸುತ್ತಿದ್ದಾರೆ.
ಖಲಿಸ್ತಾನಿ ಸಂಘಟನೆಯ ಕೈವಾಡವಿರಬಹುದೆಂಬ ಅನುಮಾನಗಳು ಉಂಟಾಗಿವೆ, ಆದರೆ ಪೊಲೀಸರು ಇನ್ನೂ ದೃಢಪಡಿಸಿಲ್ಲ. ಇದೇ ವೇಳೆ ಕ್ಯಾಪ್ಸ್ ಕೆಫೆ ತನ್ನ ಇನ್‌ಸ್ಟಾಗ್ರಾಮ್ ಮೂಲಕ “ನಾವು ಹಿಂಸೆಗೆ ಬಲಿಯಾಗಿದ್ದೇವೆ, ಆದರೆ ಬದ್ಧತೆಯಿಂದ ಮುಂದುವರೆಯುತ್ತೇವೆ” ಎಂಬ ಹೇಳಿಕೆ ಬಿಡುಗಡೆ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa