ನಾರಾಯಣ ಆದಿತಿ ಆರೋಗ್ಯ ವಿಮೆ ಬಿಡುಗಡೆ
ಶಿವಮೊಗ್ಗ, 11 ಜುಲೈ (ಹಿ.ಸ.) : ಆ್ಯಂಕರ್ : ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆ ತನ್ನ ಹೊಸ ಆರೋಗ್ಯ ವಿಮಾ ಯೋಜನೆ ‘ನಾರಾಯಣ ಆದಿತಿ’ ಯನ್ನು ಶಿವಮೊಗ್ಗದಲ್ಲಿ ಆರಂಭಿಸಿದೆ. ಈ ಯೋಜನೆಯು ದಿನಕ್ಕೆ ಕೇವಲ ₹29 ದರದಲ್ಲಿ ನಾಲ್ಕು ಜನರ ಕುಟುಂಬಕ್ಕೆ ₹1 ಕೋಟಿವರೆಗಿನ ಆರೋಗ್ಯ ಕವರೇಜ್ ಒದಗಿಸುತ್ತ
Health


ಶಿವಮೊಗ್ಗ, 11 ಜುಲೈ (ಹಿ.ಸ.) :

ಆ್ಯಂಕರ್ : ನಾರಾಯಣ ಹೆಲ್ತ್ ಇನ್ಶೂರೆನ್ಸ್ ಲಿಮಿಟೆಡ್ ಸಂಸ್ಥೆ ತನ್ನ ಹೊಸ ಆರೋಗ್ಯ ವಿಮಾ ಯೋಜನೆ ‘ನಾರಾಯಣ ಆದಿತಿ’ ಯನ್ನು ಶಿವಮೊಗ್ಗದಲ್ಲಿ ಆರಂಭಿಸಿದೆ.

ಈ ಯೋಜನೆಯು ದಿನಕ್ಕೆ ಕೇವಲ ₹29 ದರದಲ್ಲಿ ನಾಲ್ಕು ಜನರ ಕುಟುಂಬಕ್ಕೆ ₹1 ಕೋಟಿವರೆಗಿನ ಆರೋಗ್ಯ ಕವರೇಜ್ ಒದಗಿಸುತ್ತಿದ್ದು, ಇದು ಭಾರತದ ಅತ್ಯಂತ ಕೈಗೆಟುಕುವ ಆರೋಗ್ಯ ವಿಮೆಗಳಲ್ಲಿ ಒಂದಾಗಿದೆ.

ಈ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ₹1 ಕೋಟಿ ಮತ್ತು ಇತರೆ ಚಿಕಿತ್ಸೆಗೆ ₹5 ಲಕ್ಷವರೆಗೆ ವಿಮಾ ಕವರೇಜ್ ಸಿಗಲಿದೆ. ನಾರಾಯಣ ಆಸ್ಪತ್ರೆಗಳ ಜಾಲದಲ್ಲಿ ನಗದುರಹಿತ ಚಿಕಿತ್ಸೆ, ಚಿಕಿತ್ಸೆಗೆ ಮುಂಚಿನ ಮತ್ತು ನಂತರದ ವೆಚ್ಚಗಳ ಭರಣೆ, ಆಂಬ್ಯುಲೆನ್ಸ್, ಡೇ ಕೇರ್ ಮತ್ತು ಪರ್ಯಾಯ ಚಿಕಿತ್ಸೆಗಳ ಒಳಗೊಂಡ ಅನೇಕ ಸೌಲಭ್ಯಗಳನ್ನು ಇದು ಒದಗಿಸುತ್ತದೆ.

ಈ ಯೋಜನೆ ಈಗಾಗಲೇ ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಉಡುಪಿ ಸೇರಿದಂತೆ 18ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಲಭ್ಯವಿದ್ದು, ಮುಂದೆ ಇಡೀ ಭಾರತಕ್ಕೆ ವಿಸ್ತರಿಸಲಾಗುತ್ತದೆ.

ಸಂಸ್ಥೆಯ ಸಿಇಒ ಶೀಲಾ ಅನಂತ್ ಮತ್ತು ನಿರ್ದೇಶಕ ರವಿ ವಿಶ್ವನಾಥ್ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದು, ನಾರಾಯಣ ಆದಿತಿ ಯೋಜನೆಯು ಎಲ್ಲರಿಗೂ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಸಮಾನವಾಗಿ ಲಭ್ಯವಾಗಿಸುವ ದಿಟ್ಟ ಹೆಜ್ಜೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande