ಭೋಪಾಲ್, 11 ಜುಲೈ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಆಯುಷ್ ಸಚಿವಾಲಯದ ನೇತೃತ್ವದಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಕುರಿತ ಮಹತ್ವದ ಅಂತರರಾಜ್ಯ ಸಭೆ ಇಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯಲಿದೆ.
ರಾಜ್ಯಗಳ ಆಯುಷ್ ಅಧಿಕಾರಿಗಳು ಭಾಗವಹಿಸುತ್ತಿರುವ ಈ ಸಭೆಯಲ್ಲಿ, ಆಯುಷ್ ಸೇವೆಗಳನ್ನು ವೈದ್ಯಕೀಯ ಮುಖ್ಯವಾಹಿನಿಗೆ ತರಲು ಹಾಗೂ ಸಂಸ್ಥಾ ನಿರ್ಮಾಣ, ಮಾನವ ಸಂಪನ್ಮೂಲ ಬಲವರ್ಧನೆ ಕುರಿತಂತೆ ಚರ್ಚೆಗಳು ನಡೆಯಲಿವೆ.
ಮಧ್ಯ ಪ್ರದೇಶ, ಸಿಕ್ಕಿಂ,ಬಿಹಾರ, ದೆಹಲಿ, ಗೋವಾ, ನಾಗಾಲ್ಯಾಂಡ್ ರಾಜ್ಯಗಳು ಸಭೆಯಲ್ಲಿ ಪಾಲುಗೊಳ್ಳಲಿವೆ.
ಸಭೆಯಲ್ಲಿ “ಆಯುಷ್ ಮಿಷನ್ ಮತ್ತು ಸಾಮರ್ಥ್ಯ ವೃದ್ಧಿ” ಎಂಬ ವಿಷಯದ ಮೇಲೆ ನವ ನೀತಿ ರೂಪಣೆ ಕುರಿತು ಚರ್ಚೆ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa