ಜಮ್ಮು, 11 ಜುಲೈ (ಹಿ.ಸ.) :
ಆ್ಯಂಕರ್ : ಅಮರನಾಥ ಯಾತ್ರೆ ಆರಂಭವಾದ ಜುಲೈ 3ರಿಂದ ಇಂದಿನವರೆಗೆ 1.45 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪವಿತ್ರ ಗುಹೆಗೆ ಭೇಟಿ ನೀಡಿದ್ದಾರೆ. ಶುಕ್ರವಾರ, 6,482 ಯಾತ್ರಿಕರ ಮತ್ತೊಂದು ತಂಡ ಜಮ್ಮುವಿನಿಂದ ಕಾಶ್ಮೀರ ಕಣಿವೆಗೆ ಹೊರಟಿತು.
ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಭದ್ರತಾ ಬೆಂಗಾವಲುಗಳಲ್ಲಿ ಈ ತಂಡ ಹೊರಟಿದ್ದು, ಬೆಳಗ್ಗೆ 3.20ಕ್ಕೆ 107 ವಾಹನಗಳಲ್ಲಿ 2,353 ಯಾತ್ರಿಕರು ಬಾಲ್ಟಾಲ್ ಕ್ಯಾಂಪ್‌ಗೆ ಹಾಗೂ 4.04ಕ್ಕೆ 161 ವಾಹನಗಳಲ್ಲಿ 4,129 ಯಾತ್ರಿಕರು ನುನ್ವಾನ್ (ಪಹಲ್ಗಾಮ್) ನಿಂದ ಪ್ರಯಾಣಿಸಿದ್ದಾರೆ.
ಯಾತ್ರೆಗೆ ಸೇನೆ, ಬಿಎಸ್‌ಎಫ್, ಸಿಆರ್‌ಪಿಎಫ್ ಸೇರಿ 180 ಹೆಚ್ಚುವರಿ ಕಂಪನಿಗಳನ್ನೊಳಗೊಂಡ ಭದ್ರತಾ ಪಡೆಗಳು ನಿಯೋಜನೆಯಾಗಿವೆ. ಸಂಪೂರ್ಣ ಮಾರ್ಗ ಭದ್ರಪಡಿಸಲಾಗಿದ್ದು, ಹೆಚ್ಚಿನ ಯಾತ್ರಿಕರು ನೇರವಾಗಿ ಬಾಲ್ಟಾಲ್ ಮತ್ತು ನುನ್ವಾನ್ ಕ್ಯಾಂಪ್‌ಗಳಿಗೆ ತಲುಪುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa