ನವದೆಹಲಿ, 10 ಜುಲೈ (ಹಿ.ಸ.) :
ಆ್ಯಂಕರ್ : ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧಿತ ಕ್ರಮವು ಸಂವಿಧಾನಬದ್ಧವಾಗಿದ್ದು, ಚುನಾವಣಾ ಆಯೋಗದ ತೀರ್ಮಾನ ಸರಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ, ಈ ವಿಷಯದಲ್ಲಿ ನೀಡಿದ ಆದೇಶದಲ್ಲಿ, ಚುನಾವಣಾ ಆಯೋಗ ಮಾಡುತ್ತಿರುವ ಕೆಲಸ ಸಂವಿಧಾನದ ಪ್ರಕಾರವಾಗಿದೆ ಎಂದು ತಿಳಿಸಿದೆ.
2003ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿತ್ತು. ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲು ಹೊಸ ಪಟ್ಟಿ ಸಿದ್ಧಗೊಳಿಸಲು ಜೂನ್ 24ರಂದು ಆಯೋಗ ನವೀಕರಣ ಕ್ರಮ ಕೈಗೊಂಡಿದೆ. ಅನರ್ಹರ ಹೆಸರನ್ನು ತೆಗೆಯುವ ಹಾಗೂ ಅರ್ಹರನ್ನು ಸೇರಿಸುವ ಈ ಕಾರ್ಯಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದಾರೆ.
ಸಂವಿಧಾನದ 326ನೇ ವಿಧಿ ಹಾಗೂ 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 16 ಅನ್ವಯ ಈ ಕ್ರಮ ನಡೆಯುತ್ತಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆದರೆ ಈ ಕ್ರಮಕ್ಕೆ ವಿರೋಧಿಸಿ 10ಕ್ಕೂ ಹೆಚ್ಚು ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಅರ್ಜಿ ಸಲ್ಲಿಸಿದ್ದರು.
ಅಲ್ಲದೆ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಯೂ ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ಸೂಕ್ತ ಸಮಯಕ್ಕೆ ಈ ಕಾರ್ಯ ಆರಂಭವಾಗಿಲ್ಲವೆಂದು ಪ್ರಶ್ನೆ ಎದ್ದಿದೆ. ಈ ಕುರಿತು ಸುಪ್ರೀಂ ಕೋರ್ಟ್ ಆಯೋಗದ ಸ್ಪಷ್ಟನೆ ಕೇಳಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa