ನವದೆಹಲಿ, 10 ಜುಲೈ (ಹಿ.ಸ.) :
ಆ್ಯಂಕರ್ : ಜಾಗತಿಕ ಮಾರುಕಟ್ಟೆಗಳಲ್ಲಿಂದ ಲಾಭದ ಸೂಚನೆಗಳು ಲಭಿಸುತ್ತಿವೆ. ಅಮೆರಿಕದ ಎಸ್‌ಅಂಡ್‌ಪಿ 500 ಹಾಗೂ ನಾಸ್ಡಾಕ್ ಸೂಚ್ಯಂಕಗಳು ಲಾಭದೊಂದಿಗೆ ಮುಕ್ತಾಯಗೊಂಡುವು. ಡೌ ಜೋನ್ಸ್ ಫ್ಯೂಚರ್ಸ್ ಸ್ವಲ್ಪ ಇಳಿಕೆಯನ್ನು ದಾಖಲಿಸಿದೆ. ಯುರೋಪಿನ ಮಾರುಕಟ್ಟೆಗಳಲ್ಲೂ ಚುರುಕು ಕಂಡುಬಂದಿದೆ.
ಏಷ್ಯಾದ ಮಾರುಕಟ್ಟೆಗಳಲ್ಲಿ ಖರೀದಿ ಮನೋಭಾವವಿದೆ. ಜಪಾನ್‌ನ ನಿಕ್ಕಿ, ದಕ್ಷಿಣ ಕೊರಿಯಾದ ಕೋಸ್ಪಿ, ಚೀನಾದ ಶಾಂಘೈ, ತೈವಾನ್, ಸಿಂಗಪೂರ, ಇಂಡೋನೇಷ್ಯಾದ ಮಾರುಕಟ್ಟೆಗಳು ಲಾಭದ ಹಸಿರು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ. ಥೈಲ್ಯಾಂಡ್‌ನಲ್ಲಿ ರಜೆಯ ಹಿನ್ನೆಲೆಯಲ್ಲಿ ವಹಿವಾಟಿಲ್ಲ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa