ಬೆಂಗಳೂರು, 10 ಜುಲೈ (ಹಿ.ಸ.) :
ಆ್ಯಂಕರ್ : ಗುಜರಾತ್‌ನಲ್ಲಿ ಸಂಭವಿಸಿದ ಸೇತುವೆ ಕುಸಿತ ದುರ್ಘಟನೆ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದು. ಈ ದುರಂತದಲ್ಲಿ ೧೫ ಮಂದಿ ಅಮಾಯಕರ ಜೀವ ಹೋಗಿರುವುದು ಸರ್ಕಾರದ ನಿರ್ಲಕ್ಷ್ಯತೆಗೆ ಸ್ಪಷ್ಟ ಸಾಕ್ಷಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಈ ಸೇತುವೆ 3 ವರ್ಷಗಳ ಹಿಂದೆಯೇ ಅಪಾಯಕಾರಿ ಸ್ಥಿತಿಯಲ್ಲಿ ಇದ್ದದ್ದು ವರದಿಯಾಗಿತ್ತು. ಆದರೂ ಕ್ರಮ ತೆಗೆದುಕೊಳ್ಳಲಾಗಿಲ್ಲ. ಇದು ಬಿಜೆಪಿ ಸರ್ಕಾರದ ವಿಫಲತೆ, ಭ್ರಷ್ಟಾಚಾರ ಮತ್ತು ದಕ್ಷತೆಯ ಕೊರತೆಯ ಸ್ಪಷ್ಟ ಉದಾಹರಣೆ,” ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“2021 ರಿಂದ ಇದು ಗುಜರಾತ್‌ನಲ್ಲಿ ಸಂಭವಿಸಿರುವ ಏಳನೇ ಸೇತುವೆ ಕುಸಿತವಾಗಿದೆ. ಭಾಷಣ ಮತ್ತು ಜಾಹೀರಾತುಗಳ ಆಡಳಿತಕ್ಕಿಂತ ಜವಾಬ್ದಾರಿ ನಿರ್ವಹಣೆ ಮುಖ್ಯ. ದೇಶದ ಜನರು ಸಮಯ ಬಂದಾಗ ಸರಿಯಾದ ಉತ್ತರ ನೀಡುತ್ತಾರೆ,” ಎಂದು ಕಿಡಿಕಾರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa