ಸಿದ್ದರಾಮಯ್ಯ ಲಕ್ಕಿ ಲಾಟರಿ ಮುಖ್ಯಮಂತ್ರಿ : ಬಿ.ಆರ್.ಪಾಟೀಲ ಸಂಭಾಷಣೆ ಬಹಿರಂಗ
ಬೆಂಗಳೂರು, 01 ಜುಲೈ (ಹಿ.ಸ.) : ಆ್ಯಂಕರ್ : ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದವರು. ನಾನು ಅವರನ್ನು ಸೋನಿಯಾ ಗಾಂಧಿಯವರ ಜೊತೆ ಭೇಟಿಯಾಗಿಸಲು ಸಹಾಯ ಮಾಡಿದ್ದೆ. ಅವರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ನನ್ನ ಸಹಾಯದ ಪಾತ್ರವಿದೆ. ಆದರೆ ನನ್ನ ಗ್ರಹಚಾರ ಸರಿಯಾಗಿರಲಿಲ್ಲ” ಎಂದು ದೂರವಾಣಿಯಲ್ಲಿ ಮಾತನಾಡಿರು
Brp


ಬೆಂಗಳೂರು, 01 ಜುಲೈ (ಹಿ.ಸ.) :

ಆ್ಯಂಕರ್ : ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದವರು. ನಾನು ಅವರನ್ನು ಸೋನಿಯಾ ಗಾಂಧಿಯವರ ಜೊತೆ ಭೇಟಿಯಾಗಿಸಲು ಸಹಾಯ ಮಾಡಿದ್ದೆ. ಅವರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ನನ್ನ ಸಹಾಯದ ಪಾತ್ರವಿದೆ. ಆದರೆ ನನ್ನ ಗ್ರಹಚಾರ ಸರಿಯಾಗಿರಲಿಲ್ಲ” ಎಂದು ದೂರವಾಣಿಯಲ್ಲಿ ಮಾತನಾಡಿರುವ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅವರ ಮತ್ತೊಂದು ಸಂಭಾಷಣೆ ಬಹಿರಂಗವಾಗಿದೆ.

ಸಂಭಾಷಣೆಯಲ್ಲಿ ಪಾಟೀಲ ಸುರ್ಜೇವಾಲ ಅವರನ್ನು ಭೇಟಿಯಾಗಿ ಎಲ್ಲ ವಿಚಾರಗಳನ್ನೂ ತಿಳಿಸಿದ್ದೇನೆ. ಅವರು ನನ್ನ ಮಾತುಗಳನ್ನು ಗಂಭೀರವಾಗಿ ಆಲಿಸಿದ್ದಾರೆ. ಈಗ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ನೋಡಬೇಕು” ಎಂದು ಹೇಳಿದ್ದಾರೆ.

ಇತ್ತೀಚೆಗೆ ವಸತಿ ಯೋಜನೆಗಳಲ್ಲಿ ಮನೆ ನೀಡಲು ಲಂಚ ಪಡೆಯಲಾಗುತ್ತಿದೆ” ಎಂಬ ಗಂಭೀರ ಆರೋಪದ ಸಂಭಾಷಣೆ ಬಹಿರಂಗವಾಗಿ ಸರಕಾರ ಹಾಗೂ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿತ್ತು.

ಇದೇ ವಿಷಯ ಕುರಿತು ಕಾಂಗ್ರೆಸ್ ಶಾಸಕರ ಜೊತೆ ಮಾತುಕತೆ ನಡೆಸಲು ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಆಗಮಿಸಿದ ವೇಳೆ ಬಿ.ಆರ್.ಪಾಟೀಲ ದೂರವಾಣಿ ಸಂಭಾಷಣೆ ಬಹಿರಂಗವಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಉಂಟು ಮಾಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande