ರಾಯಚೂರು, 01 ಜುಲೈ (ಹಿ.ಸ.) :
ಆ್ಯಂಕರ್ : ನೇತಾಜಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಆಂಜನೇಯ ತಂ ಆದೆಪ್ಪ (26) ಕೆಲಸಕ್ಕೆ ಗುಲ್ಬರ್ಗಾಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 28/2025 ಕಲಂ ರಡಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಗೆ ಹೆಂಡತಿ ಮತ್ತು ಮಕ್ಕಳಾದ ಅಖಿಲಾ (07) ಸುಪ್ರಿಯಾ (06) ಮಗ ಅಶೋಕ (03) ಸೇರಿದಂತೆ ಒಟ್ಟು 3 ಜನ ಮಕ್ಕಳು ಇದ್ದು ಅವರನ್ನು ಬಿಟ್ಟು ಹೋಗಿರುತ್ತಾನೆ.
ವ್ಯಕ್ತಿಯ ಚಹರೆ ಪಟ್ಟಿ: ಎತ್ತರ 5.6 ಫೀಟ್, ದುಂಡು ಮುಖ, ಸಾದರಣ ಮೈ ಕಟ್ಟು, ಸಾದ ಕೆಂಪು ಬಣ್ಣ, ಕಪ್ಪು ಬಣ್ಣದ ಕೂದಲು, ಹಾಗೂ 7ನೇ ತರಗತಿ ವಿದ್ಯಾಭ್ಯಾಸ ಓದಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾನೆ.
ಈ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ನೇತಾಜಿನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-240222 ಅಥವಾ ರಾಯಚೂರು ನಗರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ: 08532-235635, 08532-235100, 9480803800 ಅಥವಾ ಪಿ.ಎಸ್.ಐ (ಕಾ.ಸು) 9480803846 ನೇತಾಜಿ ನಗರ ಠಾಣೆ ಹಾಗೂ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರು 9480803831ಗೆ ಸಂಪರ್ಕಿಸಬಹುದಾಗಿದೆ. ಮಾಹಿತಿ ನೀಡಿದವರಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು ನೇತಾಜಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್