ಕೋಲಾರ, ೦೧ ಜುಲೈ (ಹಿ.ಸ) :
ಆ್ಯಂಕರ್ : ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಾನಂದ್ ಹೊಂಗಲ್ ಹೇಳಿದರು.
ಕೋಲಾರ ನಗರ ಹೊರವಲಯದ ಟಮಕ ಬಳಿಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಎಸ್.ಎಂ ಸೆಹಗಲ್ ಘೌಂಡೇಶನ್ ವತಿಯಿಂದ ರೈತರಿಗಾಗಿ ಆಯೋಜಿಸಿದ್ದ ಜೇನು ಸಾಕಾಣಿಕೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿಯ ಜೊತೆಗೆ ಜೇನು ಸಾಕಾಣಿಕೆಯನ್ನು ಉಪಕಸುಬಾಗಿ ಕೈಗೊಂಡರೆ ಆದಾಯ ದ್ವಿಗುಣವಾಗುತ್ತದೆ. ವೈಜ್ಞಾನಿಕ ಮಾಹಿತಿ ಇಲ್ಲದೇ ಜೇನುಸಾಕಾಣಿಕೆ ಮಾಡುವುದು ಸರಿಯಲ್ಲ ಎಂದರು.
ಜೇನು ಕೃಷಿ ವಿಜ್ಞಾನಿ ಡಾ.ಮಂಜುನಾಥ್ ರೆಡ್ಡಿ ಮಾತನಾಡಿ, ಜೇನು ಸಾಕಾಣಿಕೆ ಬಗ್ಗೆ ವೈಜ್ಞಾನಿಕ ವಿಧಾನಗಳನ್ನು ಅರಿತು, ಪ್ರಾಯೋಗಿಕವಾಗಿ ಕಲಿತ ನಂತರವೇ ಜೇನು ಸಾಕಾಣಿಕೆ ಮಾಡುವುದು ಉತ್ತಮ ಎಂದು ಅಭಿಪಾಯಪಟ್ಟರು.
ಕೀಟಶಾಸ್ತçಜ್ಙೆ ಡಾ.ಅಮಲ ಮಾತನಾಡಿ, ಜೇನು ಕೃಷಿಯ ವೈಜ್ಞಾನಿಕ ವಿಧಾನಗಳು, ಅದರ ಮೂಲ, ಜೀವನ ಚಕ್ರ ಮತ್ತು ಜೇನುನೊಣ ಕುಟುಂಬದಲ್ಲಿ ರಾಣಿ ಜೇನಿನ ಮಹತ್ವ, ಜೇನು ಕೊಯ್ಲಿನ ಸರಿಯಾದ ಹಂತ, ಜೇನು ಸಾಕಣೆಯಲ್ಲಿ ವಸಾಹತುಗಳನ್ನು ನಿರ್ವಹಿಸುವುದು, ರಾಣಿ ಕೋಶವನ್ನು ಗುರುತಿಸುವುದು ಸೇರಿದಂತೆ ಮತ್ತಿತರವುಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಜ್ಞಾನಿ ಡಾ.ಆಶಾ, ವೇಣು, ಎಸ್.ಎಂ ಸೆಹಗಲ್ ಫೌಂಡೇಶನ್ ಕಾರ್ಯಕ್ರಮ ಸಹಾಯಕ ಅಧಿಕಾರಿ ವಿಜಯ್ ಪುಲಿ, ನವ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.
ಚಿತ್ರ : ಕೋಲಾರ ನಗರ ಹೊರವಲಯದ ಟಮಕ ಬಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಎಸ್.ಎಂ ಸೆಹಗಲ್ ಘೌಂಡೇಶನ್ ವತಿಯಿಂದ ರೈತರಿಗಾಗಿ ಆಯೋಜಿಸಿದ್ದ ಜೇನು ಸಾಕಾಣಿಕೆ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಶಿವಾನಂದ ಹೊಂಗಲ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್