ಕೋಲಾರ, ೦೧ ಜುಲೈ (ಹಿ.ಸ) :
ಆ್ಯಂಕರ್ : ಪೋಷಕರು ಕೆಲ ಸಮಯ ಮಕ್ಕಳೊಂದಿಗೆ ಕಳೆಯಿರಿ. ಅವರಲ್ಲಿ ತಾವಾಗಿಯೇ ಯೋಚಿಸುವ ಮನಸ್ಥಿತಿ ಬೆಳೆಸಿ. ಕೇವಲ ೪ ರೂಪಾಯಿಗೆ ವಿಶ್ವದ ಜ್ಞಾನ ನೀಡುವ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಿ ಮಾರ್ಗದರ್ಶನ ನೀಡಿ ಮಾತನಾಡಿದರು.
ಸಿನಿಮಾ, ಅಪರಾಧ
ಬಿಟ್ಟು ಕೇವಲ ೨ ವರ್ಷ ಪತ್ರಿಕೆಯೊಂದರ ಮೊದಲಿಂದ ಕೊನೆವರೆಗೂ ಓದಿದರೆ ಅಲ್ಲಿ ರಾಜಕೀಯ ಸಾಮಾಜಿಕ, ಆರ್ಥಿಕ,ಶೈಕ್ಷಣಿಕ ಜ್ಞಾನ ಸಿಗುವುದರಿದ ಖಂಡಿತಾ ಯುಪಿಎಸ್ಸಿ ತೇರ್ಗಡೆ ಸುಲಭ ಎಂದು ತಮ್ಮ ಅನುಭವ ಹಂಚಿಕೊoಡು, ಅಂತರ0ಗ ಮತ್ತು ಬಹಿರಂಗ ಎರಡೂ ಬೆಳೆಯಲು ಸಹಕಾರಿ ಎಂದರು.
ಇದೇ ಸಂದರ್ಭದಲ್ಲಿ ಹೆಲ್ಮೆಟ್ ಅಗತ್ಯತೆ ಕುರಿತು ಮಕ್ಕಳಿಗೆ ತಿಳಿಹೇಳಿದ ಅವರು, ಸ್ವಯಂ ರಕ್ಷಣೆಗೆ ಜ್ಞಾನದ ಕೋಟೆ ಕಟ್ಟಿಕೊಳ್ಳಿ ಹಾಗೆಯೇ ನಿಮ್ಮ ತಂದೆತಾಯಿಯ ಮೇಲೆ ಪ್ರೀತಿ ಇದ್ದರೆ ಹೆಲ್ಮೆಟ್ ಧರಿಸಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೀವ ಉಳಿಸಿ ಎಂದು ಸಲಹೆ ನೀಡಿದರು.
ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿ ಸದಸ್ಯ ವಾಸುದೇವಹೊಳ್ಳ ಮಾತನಾಡಿ, ಕೋಲಾರ ಜಿಲ್ಲಾ ಸಂಘ ಪ್ರಥಮಗಳಲ್ಲಿ ಪ್ರಥಮವಾಗಿದೆ, ಜಿಲ್ಲಾ ಸಂಘ ಕಟ್ಟಡ ರಾಜ್ಯಕ್ಕೆ ಮೊದಲು,ಅತ್ಯುತ್ತಮ ಭವನ ಪ್ರಶಸ್ತಿಯೂ ನಮಗೆ ಮೊದಲು ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪತ್ರಿಕೆಗಳು ಡಿಜಿಟಲ್ ಮೀಡಿಯಾ ಆಗಿ ಬದಲಾಗುತ್ತಿವೆ, ಪ್ರಿಂಟ್ ಮೀಡಿಯಾ ಇನ್ನೊಂದು ಹತ್ತು ವರ್ಷ ಇರುತ್ತದೆ ಎಂಬ ನಂಬಿಕೆ ಇಲ್ಲ ಮೊದಲ ಕನ್ನಡ ಪತ್ರಿಕೆ ಮಂಗಳೂರು ಸಮಾಚಾರ್‌ನ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಹೇಳಿರುವಂತೆ ಸತ್ಯವನ್ನು ನಾವು ಜನರಿಗೆ ತಲುಪಿಸುವ ಒಳಗಾಗಿ ಸುಳ್ಳು ಪೇಟೆ ಬೀದಿಯಲ್ಲಿ ತುಂಬಿ ಹೋಗಿರುತ್ತದೆ ಎಂಬ ಮಾತು, ಅಂಬೇಡ್ಕರ್ ಅವರ ಮಾತಿನಂತೆ ಪತ್ರಿಕೆಗಳು ಧ್ವನಿಯಿಲ್ಲದವರಿಗೆ ಧ್ವನಿಯಾಗಬೇಕು ಎಂಬ ಮಾತುಗಳನ್ನು ನೆನಪಿಸಿಕೊಂಡರು.
ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಡಿವಿಜಿ ಅವರು ರಾಜ್ಯ ಪತ್ರಕರ್ತರ ಸಂಘದ ಮೊದಲ ಅಧ್ಯಕ್ಷರು ಎಂಬುದು ಜಿಲ್ಲೆಯ ಹೆಗ್ಗಳಿಕೆಯಾಗಿದೆ. ಕೋಲಾರದ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿದ್ದು, ಅತ್ಯುತ್ತಮ ಸಂಘವೆ0ದು ಬಹುಮಾನವನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.
ಚಿತ್ರ ; ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್