ಕೋಲಾರ, ಜುಲೈ ೧ (ಹಿ.ಸ) :
ಆ್ಯಂಕರ್ : ನಿವೃತ್ತರ ಸೇವೆ, ಅನುಭವವು ಎಲ್ಲರಿಗೂ ಮಾರ್ಗದರ್ಶನವಾಗಲೆಂದರು. ಉದ್ಯೋಗಿಗಳಿಗೆ ನಿವೃತ್ತಿಯು ಇದ್ದೇ ಇರುತ್ತದೆ, ಇರುವುದರೊಳಗೆ ಉತ್ತಮವಾದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂದರು. ನೈತಿಕ ಬೆಂಬಲದೊ0ದಿಗೆ ಉತ್ತಮ ಬಾಂಧವ್ಯದ ಪರಿಸರದಲ್ಲಿ ಸರ್ಕಾರಿ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವ ನಿಷ್ಠೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾ0ತರಾಜು ಕರೆ ನೀಡಿದರು.
ಕೆಜಿಎಫ್ ನಗರದ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಜೂ. ೩೦ ರಂದು ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಎಆರ್‌ಎಸ್‌ಐ ಗಳಾದ ಜಿ.ರಾಜ್‌ಕುಮಾರ್, ಎಸ್.ಮುನಿಕೃಷ್ಣಪ್ಪ ಅವರನ್ನು ಬೀಳ್ಕೊಡಲಾಯಿತು.
ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ, ಮುಂದಿನ ಜೀವನವನ್ನು ನಮ್ಮದಾಗಿ ಕಳೆಯೋಣ, ಇಬ್ಬರೂ ಅಚ್ಚುಕಟ್ಟಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದ್ದೀರಿ, ತಮಗೆ ಬಯಸಿದ್ದು ದೇವರು ಕರುಣಿಸಲು ಎಂದು ಶುಭ ಹಾರೈಸಿದರು. ಮುಂದಿನ ಜೀವನವು ಸುಖ, ಶಾಂತಿ ಮತ್ತು ಸಮೃದ್ಧಿಯಿಂದ ಕೂಡಿರಲಿ ಎಂದು ಕೆಜಿಎಫ್ ಜಿಲ್ಲಾ ಎಸ್.ಪಿ. ಶಾಂತ ಕುಮಾರ್ ಹಾರೈಸಿದರು.
ನಿವೃತ್ತ ಅಧಿಕಾರಿಗಳಾದ ಡಿಎಆರ್‌ನ ಎಆರ್‌ಎಸ್‌ಐ ಜಿ.ರಾಜ್‌ಕುಮಾರ್, ಎಸ್.ಮುನಿಕೃಷ್ಣಪ್ಪ ರವರುಗಳು ಪೊಲೀಸ್ ಇಲಾಖೆಯ ವಿವಿಧ ವಿಭಾಗ, ಕಛೇರಿಗಳಲ್ಲಿ ಅರ್ಥಪೂರ್ಣ ಸೇವೆಯನ್ನು ಸಲ್ಲಿಸಿದ್ದಾರೆ.
ನಿವೃತ್ತರಾದವರಿಗೆ ಶಾಲು ಹೊದಿಸಿ, ಹಣ್ಣುಹಂಪಲು ನೀಡಿ ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ನಿವೃತ್ತ ಅಧಿಕಾರಿಗಳ ಕುಟುಂಬ ವರ್ಗದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಎಸ್.ಪಾಂಡುರ0ಗ, ಸಶಸ್ತç ಪೊಲೀಸ್ ಇನ್ಸ್ಪೆಕ್ಟರ್ ವಿ.ಸೋಮಶೇಖರ, ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.
ಚಿತ್ರ : ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಕೆಜಿಎಫ್ ಎಸ್.ಪಿ ಕೆ.ಎಂ.ಶಾ0ತರಾಜು ಡಿವೈಎಸ್‌ಪಿ ಎಸ್.ಪಾಂಡುರ0ಗ ಸನ್ಮಾನಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್