ಬಳ್ಳಾರಿ, 01 ಜುಲೈ (ಹಿ.ಸ.) :
ಆ್ಯಂಕರ್ : ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಗತಿಯಲ್ಲಿ ಪ್ರಾಚಾರ್ಯರಾಗಿ ವಯೋ ನಿವೃತ್ತಿ ಹೊಂದಿದ ಡಾ. ಸಿ.ಎಚ್. ಸೋಮನಾಥ್ ಅವರ ಪಾತ್ರ ಗಮನಾರ್ಹ ಎಂದು ಉಪನ್ಯಾಸಕ ಡಾ. ದೇವಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಲೇಜು ಅಧ್ಯಾಪಕರ ಸಂಘದ ಹಮ್ಮಿಕೊಂಡಿದ್ದ ಡಾ.ಸಿ.ಎಚ್. ಸೋಮನಾಥ್ ಅವರ ಬೀಳ್ಕೊಡುಗೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪದವಿ ಕಾಲೇಜಿನ ಅರೆಕಾಲಿಕ ಉಪನ್ಯಾಸಕರ ಹುದ್ದೆಗಳು ಪೂರ್ಣಕಾಲಿಕವಾಗಿ ಕಾಯಂ ಆಗುವಲ್ಲಿ
ಹೋರಾಟಗಾರ ಡಾ. ಸಿ.ಎಚ್. ಸೋಮನಾಥ್ ಅವರು ಶ್ರಮಿಸಿದ್ದಾರೆ. 1991ರಲ್ಲಿ ಸರಳಾದೇವಿ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇರಿ ಸಹಾಯಕ, ಸಹ ಹಾಗೂ ಪ್ರಾಧ್ಯಾಪಕರಾಗಿ ಪ್ರಾಚಾರ್ಯರಾಗಿ ನಿವೃತ್ತಿ ಹೊಂದುತ್ತಿರುವುದು ದಾಖಲೆಯೇ ಸರಿ ಎಂದು ಹೇಳಿದರು.
ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹುಚ್ಚುಸಾಬ್ ಅವರು, ಬಡ ವಿದ್ಯಾರ್ಥಿಗಳಿಗೆ ಸಹಾಯ ನೀಡುವ
ಡಾ. ಸಿ.ಎಚ್. ಸೋಮನಾಥ್ ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಮಾನವೀಯತೆ ಹೊಂದಿರುವ ಸಹೃದಯಿ ಇವರು ಎಂಧರು.
ನಿವೃತ್ತ ಪ್ರಾಚಾರ್ಯ ನಾರಾಯಣಪ್ಪ, ನಿವೃತ್ತ ಪ್ರಾಚಾರ್ಯ ಡಾ. ರಾಘವಲು, ಡಾ. ಶೋಭರಾಣಿ, ಡಾ. ಕೊಟ್ರಪ್ಪ, ಡಾ. ಪಂಪನಗೌಡ, ಬಳ್ಳಾರಿ ಜಿಲ್ಲಾ ಸರಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಟಿ. ದುರುಗಪ್ಪ ಅವರು ಡಾ. ಸಿ.ಎಚ್. ಸೋಮನಾಥ್ ಅವರ ಸೇವೆ, ಹೋರಾಟ ಮತ್ತು ಬದ್ಧತೆಗಳನ್ನು ಸ್ಮರಿಸಿದರು.
ಪತ್ರಕರ್ತ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ. ಮಂಜುನಾಥ್ ಅವರು, ಡಾ. ಸಿ.ಎಚ್. ಸೋಮನಾಥ್ ಅವರ ಒಡನಾಟ, ಹಾಸ್ಟಲ್ ಜೀವನ, ಹೋರಾಟಗಳು, ಬದ್ಧತೆಗಳನ್ನು ಸ್ಮರಿಸಿದರು.
ಡಾ. ಸಿ.ಎಚ್. ಸೋಮನಾಥ ಅವರು, ಅಭಿನಂದನೆ ಸ್ವೀಕರಿಸಿ, ನನ್ನಲ್ಲಿರುವ ಶಿಸ್ತು, ಬದ್ಧತೆ, ವಿಭಿನ್ನ ಚಿಂತನೆಗಳು ವಿದ್ಯಾರ್ಥಿಗಳ ಮನಸೂರೆಗೊಂಡಿದ್ದವು. 31 ವರ್ಷಗಳ ಕಾಲ ಉಪನ್ಯಾಸಕ, ಪ್ರಾಧ್ಯಾಪಕ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿರುವೆ. ಪ್ರತಿ ಹಂತದಲ್ಲೂ ನನಗೆ ಸಹಕಾರ ನೀಡಿದರಿಗೆ ಕೃತಜ್ಞತೆಗಳು ಎಂದರು.
ಅಮರೇಗೌಡ ದಿನ್ನಿ, ಡಾ. ಗುರುಬಸಪ್ಪ ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿದ್ದರು. ಅಧ್ಯಾಪಕರ ಸಂಘದ ಕಾರ್ಯದರ್ಶಿ ಡಾ. ಎಸ್. ಮಂಜುನಾಥ್ ಸ್ವಾಗತಿಸಿ, ಕಾಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ಉಪನ್ಯಾಸಕ ಸಮೀಉಲ್ಲಾ ಅವರು ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್