ಕೊಪ್ಪಳ, 01 ಜುಲೈ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಒಟ್ಟು 20 ಪ್ರವಾಸಿ ಮಿತ್ರ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳಾದ ಸುರೇಶ ಬಿ.ಇಟ್ನಾಳ ಅವರು ಜಿಲ್ಲಾಡಳಿತ ಭವನದಲ್ಲಿ ಸಮವಸ್ತ್ರದ ಕಿಟ್ ವಿತರಿಸಿದರು.
ಸಮವಸ್ತ್ರ ಕಿಟ್‍ನಲ್ಲಿ 02 ಜೊತೆ ಖಾಕಿ ಸಮವಸ್ತ್ರ, ಒಂದು ಜೊತೆ ಶೂ, ಒಂದು ಬ್ಲಾಕ್ ಬೆಲ್ಟ್, ಪ್ರವಾಸಿ ಮಿತ್ರ ಬಕಲ್, ಒಂದು ಕ್ಯಾಪ್, ಒಂದು ಜಾಕೆಟ್, ಸೈಡ್ ಮತ್ತು ಶೋಲ್ಡರ್ ಬ್ಯಾಡ್ಜ್ ಮತ್ತು ನೇಮ್‍ಬೋರ್ಡ್‍ಗಳನ್ನು ಒಳಗೊಂಡಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಲ್ಲೂರಿನ ಹತ್ತಿ ಕೈಮಗ್ಗ ನೇಕಾರರ ಸಂಘ ನಿಯಮಿತ(ರಿ) ದಿಂದ ಸಮವಸ್ತ್ರಗಳನ್ನು ಸಿದ್ದಪಡಿಸಲಾಗಿದೆ.
ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮ್ ಎಲ್.ಅರಸಿದ್ದಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಸೇರಿದಂತೆ ಪ್ರವಾಸಿ ಮಿತ್ರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್