ಸಿಂಧನೂರು/ರಾಯಚೂರು, 01 ಜುಲೈ (ಹಿ.ಸ.) :
ಆ್ಯಂಕರ್ : ಗೋ ರಕ್ಷಣೆಗೆ ಮುಂದಾಗಿದ್ದ ಭಜರಂಗದಳದವರ ಪುಂಡರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿ, ಪರಾರಿ ಆಗಿರುವದನ್ನು ಖಂಡಿಸಿ ಭಜರಂಗ ದಳದ ಜಿಲ್ಲಾ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿ, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಸೋಮವಾರ ಭೇಟಿ ಮಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ.
ಬಜರಂಗದಳದ ತಾಲೂಕು ಸಂಚಾಲಕರಾದ ಮನೋಹರ, ಮುಖಂಡರಾದ ಶಿವಕುಮಾರ್, ಅನಿಲ್ ಕುಮಾರ್ ದೇವರಾಜ್ ಸೇರಿದಂತೆ 8 ಜನರು ಗಾಯಗೊಂಡಿದ್ದರು.
ಗಾಯಗೊಂಡವರು ಸಿಂಧನೂರು ತಾಲೂಕಿನ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷರಾದ ವೀರನಗೌಡ ಲೆಕ್ಕಿಹಾಳ್. ಸಿಂಧನೂರು ಮುಖಂಡ ಕೆ. ಕರಿಯಪ್ಪ ಅವರು ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಆತ್ಮಸ್ಥೈರ್ಯ ನೀಡಿ, ಪೊಲೀಸರು ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದರು.
ರಾಯಚೂರುನ ರಿಮ್ಸ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರ ಆರೋಗ್ಯವನ್ನು ವಿಚಾರಿಸಲು ರಿಮ್ಸ್‍ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಕಾರ್ಯಕರ್ತರ ಜೊತೆಗೆ ಪಕ್ಷವಿದೆ. ದುಷ್ಕರ್ಮಿಗಳ ಗುಂಪನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡುವ ನಿಟ್ಟಿನಲ್ಲಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರರೆಡ್ಡಿ, ಸಂತೋಷ್ ರಾಜಗುರು, ನಗರ ಯುವಮೋರ್ಚಾ ಅಧ್ಯಕ್ಷ ವಿನಾಯಕರಾವ್ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್