ಮುಂಬಯಿನಲ್ಲಿ ರೈಲು ದುರಂತ : ೫ಕ್ಕೂ ಹೆಚ್ಚು ಪ್ರಯಾಣಿಕರ ದುರ್ಮರಣ
ಮುಂಬಯಿ, 09 ಜೂನ್ (ಹಿ.ಸ.) : ಆ್ಯಂಕರ್ : ಚಲಿಸುತ್ತಿದ್ದ ರೈಲಿನಿಂದು‌ ಬಿದ್ದು ೫ಕ್ಕೂ ಹೆಚ್ಚು ಪ್ರಯಾಣಿಕರು ಸಾವನಪ್ಪಿರುವ ಘಟನೆ‌ ಮಹಾರಾಷ್ಟ್ರದ ಮುಂಬೈನ ಉಪನಗರ ಮುಂಬ್ರಾ ಮತ್ತು ದಿವಾ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ. ಕಿಕ್ಕಿರಿದು ತುಂಬಿದ್ದ ರೈಲಿನ ಬಾಗಿಲುಗಳು ಬಳಿ ನೇತಾಡುತ್ತಿದ್ದ 10ರಿಂದ
ಮುಂಬಯಿನಲ್ಲಿ ರೈಲು ದುರಂತ : ೫ಕ್ಕೂ ಹೆಚ್ಚು ಪ್ರಯಾಣಿಕರ ದುರ್ಮರಣ


ಮುಂಬಯಿ, 09 ಜೂನ್ (ಹಿ.ಸ.) :

ಆ್ಯಂಕರ್ : ಚಲಿಸುತ್ತಿದ್ದ ರೈಲಿನಿಂದು‌ ಬಿದ್ದು ೫ಕ್ಕೂ ಹೆಚ್ಚು ಪ್ರಯಾಣಿಕರು ಸಾವನಪ್ಪಿರುವ ಘಟನೆ‌ ಮಹಾರಾಷ್ಟ್ರದ ಮುಂಬೈನ ಉಪನಗರ ಮುಂಬ್ರಾ ಮತ್ತು ದಿವಾ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ.

ಕಿಕ್ಕಿರಿದು ತುಂಬಿದ್ದ ರೈಲಿನ ಬಾಗಿಲುಗಳು ಬಳಿ ನೇತಾಡುತ್ತಿದ್ದ 10ರಿಂದ 12 ಮಂದಿ ಪ್ರಯಾಣಿಕರು ಹಳಿ ಮೇಲೆ ಬಿದ್ದಿದ್ದಾರೆ. ಹಳಿ ಮೇಲೆ ಬಿದ್ದವರಲ್ಲಿ ೫ಕ್ಕೂ ಹೆಚ್ಚು ಪ್ರಯಾಣಿಕರ ಸಾವನಪ್ಪಿ ಹಲವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೆಲವರ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದಾಗಿ ಸ್ಥಳಿಯ ರೈಲು ಸೇವೆಯಲ್ಲಿ ಅಡಚಣೆ ಉಂಟಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande