ನವದೆಹಲಿ, 09 ಜೂನ್ (ಹಿ.ಸ.) :
ಆ್ಯಂಕರ್ : ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆಯಡಿ ದೇಶದ ಎಲ್ಲಾ ಜಿಲ್ಲೆಗಳ ಮಟ್ಟದಲ್ಲಿ ಯುವ ಇತಿಹಾಸಕಾರರ ತಂಡ ರಚಿಸಲು ಆರ್ ಎಸ್ಎಸ್ ನಿರ್ಧರಿಸಿದೆ.
ನವದೆಹಲಿಯ ಝಂಡೆವಾಲನ್‌ನ ಕೇಶವ್ ಕುಂಜ್ ಆವರಣದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಾರ್ಯಾಗಾರವನ್ನು ಅಖಿಲ ಭಾರತ ಇತಿಹಾಸ ಸಂಕಲನ ಯೋಜನೆ ಹಾಗೂ ಮಾಧವ ಸಂಸ್ಕೃತಿ ನ್ಯಾಸ ಜಂಟಿಯಾಗಿ ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲ್ಮುಕುಂದ್ ಪಾಂಡೆ, ಡಾ. ಸಂಜಯ್ ಮಿಶ್ರಾ (ಶ್ರೀಹರ್ಷ), ಡಾ. ರತ್ನೇಶ್ ತ್ರಿಪಾಠಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಈ ಕಾರ್ಯಾಗಾರದಲ್ಲಿ ಇತಿಹಾಸ ಸಂಕಲನದ 10 ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಪ್ರತಿ ಜಿಲ್ಲೆಯಲ್ಲಿ ಯುವ ಇತಿಹಾಸಕಾರರ ನೇತೃತ್ವದಲ್ಲಿ ಸ್ಥಳೀಯ ಇತಿಹಾಸ ಸಂಗ್ರಹ, ಶೋಧನೆ ಹಾಗೂ ದಾಖಲಾತಿಗಳ ಕೆಲಸಕ್ಕೆ ತಂಡ ರಚನೆ ಮಾಡಲಾಗುವುದು ಎಂದು ನಿರ್ಧರಿಸಲಾಯಿತು.
20 ರಾಜ್ಯಗಳ ಯುವ ಇತಿಹಾಸಕಾರರು ಹಾಗೂ ಉನ್ನತ ಪದವೀಧರರು ಕಾರ್ಯಾಗಾರದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಇತಿಹಾಸದ ನಿಖರ ದಾಖಲೆಗಾಗಿ ಭಾರತೀಯ ದೃಷ್ಟಿಕೋನದಲ್ಲಿ ಸಂಗ್ರಹಣೆ ಕೈಗೊಳ್ಳುವ ಉದ್ದೇಶ ಇದಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa