ಜೋತಿ ಮಲ್ಹೋತ್ರಾ ನ್ಯಾಯಾಂಗ ವಶ ಅವಧಿ ವಿಸ್ತರಣೆ
ಹಿಸಾರ್, 09 ಜೂನ್ (ಹಿ.ಸ.) : ಆ್ಯಂಕರ್ : ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾದ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ನ್ಯಾಯಾಲಯವು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜ್ಯೋತಿ ಮಲ್ಹೋತ್ರಾಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಿಸಾರ್ ನ್ಯಾಯಾಲಯ
ಜೋತಿ ಮಲ್ಹೋತ್ರಾ ನ್ಯಾಯಾಂಗ ವಶ ಅವಧಿ ವಿಸ್ತರಣೆ


ಹಿಸಾರ್, 09 ಜೂನ್ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಲಾದ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳನ್ನು ನ್ಯಾಯಾಲಯವು ಮತ್ತೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಜ್ಯೋತಿ ಮಲ್ಹೋತ್ರಾಳನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಿಸಾರ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಜ್ಯೋತಿಯನ್ನು 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಈಗ ಜ್ಯೋತಿ ಮಲ್ಹೋತ್ರಾ ಜೂನ್ 23 ರವರೆಗೆ ನ್ಯಾಯಾಂಗ ವಶದಲ್ಲಿರಲಿದ್ದಾರೆ. ಸಿವಿಲ್ ಲೈನ್ ಪೊಲೀಸರು ಜ್ಯೋತಿ ಮಲ್ಹೋತ್ರಾ ವಿರುದ್ಧ ಬೇಹುಗಾರಿಕೆ ಆರೋಪ ಸೇರಿದಂತೆ ಹಲವಾರು ವಿಭಾಗಗಳ ಅಡಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande