ಸುಕ್ಮಾ, 08 ಜೂನ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ಪೂರ್ವರ್ಥಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಕ್ಸಲೀಯರು ಗ್ರಾಮ ಪಟೇಲ್ ಗೋರ್ಕೊ ರಾಮ ಅವರನ್ನು ಹತ್ಯೆ ಮಾಡಿದ್ದಾರೆ.
ಪೊಲೀಸ ಮೂಲಗಳ ಪ್ರಕಾರ, ಸುಮಾರು 10-15 ನಕ್ಸಲರು ಪಟೇಲ್ ಅವರ ಮನೆಗೆ ನುಗ್ಗಿ, ಹರಿತ ಆಯುಧಗಳಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ. ಕುಖ್ಯಾತ ನಕ್ಸಲೈಟ್ ಹಿದ್ಮಾ ಅವರ ಈ ಪೂರ್ವವರ್ಥಿ ಗ್ರಾಮದಲ್ಲೇ ಈ ಕೃತ್ಯ ಸಂಭವಿಸಿದೆ. ಕೊಲೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶೋಧ ಕಾರ್ಯಾಚರಣೆ ಮತ್ತು ಗಸ್ತು ತೀವ್ರಗೊಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa