ಬಾಲಿವುಡ್ ನಟ ಡಿನೋ ಮೋರಿಯಾ ಗೆ ಇಡಿ ಸಮನ್ಸ್
ಮುಂಬಯಿ, 07 ಜೂನ್ (ಹಿ.ಸ.) : ಆ್ಯಂಕರ್ : ಮುಂಬೈನ ಮಿಥಿ ನದಿಯ ಶುದ್ಧೀಕರಣ ಯೋಜನೆ ಸಂಬಂಧಿತ ಭ್ರಷ್ಟಾಚಾರ ಹಗರಣದಲ್ಲಿ ಬಾಲಿವುಡ್ ನಟ ಡಿನೋ ಮೋರಿಯಾ ಹೆಸರು ತೀವ್ರವಾಗಿ ಕೇಳಿ ಬರುತ್ತಿದ್ದು, ಜಾರಿ ನಿರ್ದೇಶನಾಲಯ ಶನಿವಾರ ಅವರಿಗೆ ಸಮನ್ಸ್ ಕಳುಹಿಸಿದ್ದು, ಮುಂದಿನ ವಾರ ವಿಚಾರಣೆ ನಡೆಯಲಿದೆ. ಮೂಲಗಳ ಪ್ರಕ
ED


ಮುಂಬಯಿ, 07 ಜೂನ್ (ಹಿ.ಸ.) :

ಆ್ಯಂಕರ್ : ಮುಂಬೈನ ಮಿಥಿ ನದಿಯ ಶುದ್ಧೀಕರಣ ಯೋಜನೆ ಸಂಬಂಧಿತ ಭ್ರಷ್ಟಾಚಾರ ಹಗರಣದಲ್ಲಿ ಬಾಲಿವುಡ್ ನಟ ಡಿನೋ ಮೋರಿಯಾ ಹೆಸರು ತೀವ್ರವಾಗಿ ಕೇಳಿ ಬರುತ್ತಿದ್ದು, ಜಾರಿ ನಿರ್ದೇಶನಾಲಯ ಶನಿವಾರ ಅವರಿಗೆ ಸಮನ್ಸ್ ಕಳುಹಿಸಿದ್ದು, ಮುಂದಿನ ವಾರ ವಿಚಾರಣೆ ನಡೆಯಲಿದೆ.

ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಇಡಿ 15 ಮಂದಿಯ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಪ್ರಮುಖ ಆರೋಪಿಯ ಬ್ಯಾಂಕ್ ಖಾತೆಯಿಂದ ಡಿನೋ ಮೋರಿಯಾ ಖಾತೆಗೆ ಹಣ ವರ್ಗಾವಣೆಗೊಂಡಿರುವುದು ಪತ್ತೆಯಾಗಿದೆ.

ಈ ಹಣಕಾಸಿನ ವಹಿವಾಟು ವೈಯಕ್ತಿಕವೆಂದು ನಟರು ಸ್ಪಷ್ಟಪಡಿಸಿದರೂ, ಇಡಿಗೆ ಅದು ಸಮಾಧಾನಕಾರಿಯಾಗಿಲ್ಲ.

ಈಗಾಗಲೇ ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ಡಿನೋ ಮೋರಿಯಾಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಹಗರಣದಲ್ಲಿ ₹65 ಕೋಟಿ ರೂ.ಗಳ ಅಕ್ರಮ ವ್ಯವಹಾರಗಳು ನಡೆದಿರುವ ಶಂಕೆ ಇದೆ. ಮಿಥಿ ನದಿಯು ಮುಂಬೈನ ಪ್ರಮುಖ ಒಳಚರಂಡಿ ಮಾರ್ಗವಾಗಿದ್ದು, ಇದನ್ನು ಸ್ವಚ್ಛಗೊಳಿಸಲು 'ಡ್ರೆಡ್ಜಿಂಗ್' ಉಪಕರಣಗಳ ಖರೀದಿಯಲ್ಲಿ ಟೆಂಡರ್ ಲೋಪ, ಹಣದ ದುರುಪಯೋಗ ಸೇರಿದಂತೆ ಹಲವಾರು ಅಕ್ರಮಗಳು ನಡೆದಿದೆ ಎನ್ನಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande