ಬಳ್ಳಾರಿ, 4 ಜೂನ್ (ಹಿ.ಸ.)
ಆ್ಯಂಕರ್: ಬಳ್ಳಾರಿ ಗ್ರಾಮೀಣ ಉಪ-ವಿಭಾಗ ಜೆಸ್ಕಾಂ ರ ವ್ಯಾಪ್ತಿಗೆ ಬರುವ 33/11ಕೆ.ವಿ ರೂಪನಗುಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯ ಹಮ್ಮಿಕೊಳ್ಳುತ್ತಿರುವುದರಿಂದ ಜೂನ್ 06 ರಂದು ಬೆಳಿಗ್ಗೆ 09 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ಗ್ರಾಮೀಣ ಉಪ-ವಿಭಾಗದ ವ್ಯಾಪ್ತಿಯ ಎಫ್-95 ರೂಪನಗುಡಿ ಐಪಿ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್, ಕೃಷಿ ಪ್ರದೇಶಗಳು ಮತ್ತು ಎಫ್-96 ರೂಪನಗುಡಿ ಎನ್‍ಜೆವೈ ಮಾರ್ಗದ ರೂಪನಗುಡಿ, ರಾಯಾಪುರ, ಕುಂಟನಹಾಳ್ ಗ್ರಾಮಗಳು ಸೇರಿದಂತೆ ಇನ್ನೂ ಮುಂತಾದ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್